
ಬಾಲಿವುಡ್ ತಾರೆ ಆಲಿಯಾ ಭಟ್ ತಮ್ಮ ಸಹಜ ಸೌಂದರ್ಯದಿಂದ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ಬಾಲಿವುಡ್ನಲ್ಲಿ ಭದ್ರವಾಗಿ ನೆಲೆಯೂರಿರುವ ನಟಿ ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲೂ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಆಲಿಯಾ ಸಿಂಪಲ್ ದಿರಿಸಿನಲ್ಲಿ ಕಾಣಿಸಿಕೊಂಡು, ಮಸ್ತ್ ಪೋಸ್ ನೀಡಿರುವ ಚಿತ್ರಗಳು ವೈರಲ್ ಆಗಿವೆ.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಭಟ್ ನಟನೆಯ ‘ಆರ್ಆರ್ಆರ್’, ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಕಾಣಲು ಸಿದ್ಧವಾಗಿದೆ. ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ತಡವಾಗಿದೆ.

ಆಲಿಯಾ ಹಾಗೂ ಅವರ ಗೆಳೆಯ ರಣಬೀರ್ ಕಪೂರ್ ಮೊದಲ ಬಾರಿಗೆ ಜತೆಯಾಗಿ ಬಣ್ಣಹಚ್ಚುತ್ತಿರುವ ‘ಬ್ರಹ್ಮಾಸ್ತ್ರ’ದ ಕೆಲಸಗಳೂ ಸಾಗುತ್ತಿವೆ.

‘ಡಾರ್ಲಿಂಗ್ಸ್’, ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಕೂಡ ಅವರ ಬತ್ತಳಿಕೆಯಲ್ಲಿವೆ.