ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನ ನೀಡಿದೆ. ಮೊದಲ ಮೂರು ಪಂದ್ಯಗಳಲ್ಲಿಯೇ ಸರಣಿ ಕೈವಶ ಮಾಡಿಕೊಂಡಿದ್ದ ಆಸ್ಟ್ರೇಲಿಯ ತಂಡ ಐದನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡವನ್ನು 146 ರನ್ ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ವಶಪಡಿಸಿಕೊಂಡರು. ಸಿಡ್ನಿಯಲ್ಲಿಯೂ ಇಂಗ್ಲೆಂಡ್ ಸ್ವಲ್ಪದರಲ್ಲೇ ಸೋಲನ್ನು ತಪ್ಪಿಸಿತು, ಇಲ್ಲದಿದ್ದರೆ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡುತ್ತಿತ್ತು. ಅಲ್ಲದೆ, 4-0 ಅಂತರದ ಗೆಲುವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯ ತಂಡಕ್ಕೆ ಸಾಕಷ್ಟು ಲಾಭ ತಂದಿದೆ.