ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಪ್ರೆಗ್ನೆಂಟ್ ಆದ ವಿಚಾರ ಘೋಷಿಸಿದರು. ಈಗ ಆಲಿಯಾ ಕಡೆಯಿಂದ ಮತ್ತೊಂದು ಘೋಷಣೆ ಆಗಿದೆ.
ಮದುವೆ ಆಗಿ ಕಪೂರ್ ಕುಟುಂಬಕ್ಕೆ ಸೇರಿದ ನಂತರದಲ್ಲೂ ಆಲಿಯಾ ತಮ್ಮ ಸರ್ನೇಮ್ ಬದಲಿಸಿಕೊಂಡಿಲ್ಲ. ಎಲ್ಲಾ ದಾಖಲೆಗಳಲ್ಲಿ ಅವರು ಹೆಸರು ಭಟ್ ಎಂದೇ ಇದೆ. ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ.
‘ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಕಪೂರ್ ಸರ್ನೇಮ್ ಅನ್ನು ನನ್ನ ದಾಖಲೆಗಳಿಗೆ ಸೇರಿಸಿಕೊಳ್ಳಲು ಆಗಿರಲಿಲ್ಲ. ಶೀಘ್ರದಲ್ಲೇ ಆ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಆಲಿಯಾ. ಈ ಮೂಲಕ ಅವರು ಆಲಿಯಾ ಕಪೂರ್ ಆಗಲಿದ್ದಾರೆ.
‘ನಾನು ರಣಬೀರ್ ಒಟ್ಟಿಗೆ ತೆರಳುವಾಗ ದಾಖಲೆಗಳಲ್ಲಿ ನನ್ನ ಸರ್ನೇಮ್ ಭಟ್ ಎಂದಿರುತ್ತದೆ, ರಣಬೀರ್ ಅವರದ್ದು ಕಪೂರ್ ಎಂದಿರುತ್ತದೆ. ಇಬ್ಬರ ಸರ್ನೇಮ್ ಕಪೂರ್ ಎಂದಿರಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ಆಲಿಯಾ.
ಹಾಗಂತ ಆಲಿಯಾ ಎಲ್ಲ ಕಡೆಗಳಲ್ಲೂ ಆಲಿಯಾ ಕಪೂರ್ ಎಂದು ಮಾಡಿಕೊಳ್ಳುವುದಿಲ್ಲ. ಕೇವಲ ದಾಖಲೆಗಳಲ್ಲಿ ಆಲಿಯಾ ಕಪೂರ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಈಗಿರುವ ಹೆಸರೇ ಬಳಕೆಯಲ್ಲಿ ಇರಲಿದೆ.