
ಜೂನಿಯರ್ ಎನ್ಟಿಆರ್ ಅವರು ವೋಟ್ ಹಾಕಿದ ಬಳಿಕ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ. ಮತ ಹಾಕುವಂತೆ ಅವರು ಅಭಿಮಾನಿಗಳ ಬಳಿ ಕೋರಿದ್ದಾರೆ.

ಅಲ್ಲು ಅರ್ಜುನ್ ಅವರು ಸರತಿ ಸಾಲಲ್ಲಿ ನಿಂತಿದ್ದರು. ಜನಸಾಮಾನ್ಯರಂತೆ ನಿಂತು ಅವರು ವೋಟ್ ಮಾಡಿದ್ದು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ರಾಜಮೌಳಿ ಹಾಗೂ ಅವರ ಪತ್ನಿ ರಮಾ ಒಟ್ಟಾಗಿ ಬಂದು ಮತ ಚಲಾಯಿಸಿದ್ದಾರೆ. ಈ ಸಂದರ್ಭದ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಸ್ಕರ್ ವಿಜೇತ ಎಂಎಂ ಕೀರವಾಣಿ ಕೂಡ ಮತ ಹಾಕಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಕ್ಯಾಮೆರಾಗಳನ್ನು ಹಿಡಿದು ಬರಲಾಯಿತು. ಈ ವೇಳೆ ಅವರು ಇಷ್ಟೊಂದು ಹೈಪ್ ಕೊಡದಂತೆ ಮನವಿ ಮಾಡಿಕೊಂಡರು.

ಚಿರಂಜೀವಿ ಕೂಡ ಮತದಾನ ಮಾಡಿದರು. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಅವರು ಐಷಾರಾಮಿ ಕಾರಲ್ಲಿ ಮತದಾನ ಕೇಂದ್ರಕ್ಕೆ ಬಂದರು.

ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಕೂಡ ತಮ್ಮ ವೋಟ್ನ ಚಲಾಯಿಸಿದ್ದಾರೆ. ಅವರು ಕೂಡ ಈ ಬಾರಿ ಎಲೆಕ್ಷನ್ನಲ್ಲಿ ಸ್ಪರ್ಧಿಸಿದ್ದಾರೆ.
Published On - 11:47 am, Mon, 13 May 24