
ಜೀ ಕನ್ನಡ ವಾಹನಿಯಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಸುಧಾ ಹೆಸರಿನ ಪಾತ್ರವನ್ನು ಮೇಘಾ ಶೆಣೋಯ್ ಅವರು ನಿರ್ವಹಿಸುತ್ತಿದ್ದಾರೆ. ಅವರಿಗೆ ಈಗ ನಿಶ್ಚಿತಾರ್ಥ ನೆರವೇರಿದೆ. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ದೀವಾನ್ ತಂಗಿ ಪಾತ್ರದಲ್ಲಿ ಮೇಘಾ ಕಾಣಿಸಿಕೊಂಡಿದ್ದಾರೆ. ತಮ್ಮ ಸರಳ ನಟನೆಯ ಮೂಲಕ ಅವರು ಎಲ್ಲರ ಗಮನ ಸೆಳೆದರು. ಈಗ ಅವರ ನಿಶ್ಚಿತಾರ್ಥ ನೆರವೇರಿದೆ.

ಮೇಘಾ ವಿವಾಹ ಆಗುತ್ತಿರುವ ಹುಡುಗನ ಹೆಸರು ಭರತ್. ಇಬ್ಬರದ್ದೂ ಒಳ್ಳೆಯ ಜೋಡಿ ಎಂದು ಅನೇಕರು ಹೇಳಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಾ ಇದೆ.

ಮೇಘಾ ಅವರು ಮಾಡೆಲ್ ಆಗಿ ಗಮನ ಸೆಳೆದವರು. ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿದ್ದಾರೆ. ಅವರು ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.

ಮೇಘಾ ಶೆಣೋಯ್ ವಿವಾಹ ದಿನಾಂಕ ಇನ್ನಷ್ಟೇ ಅಧಿಕೃತವಾಗಬೇಕಿದೆ. ಅವರ ವಿವಾಹಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಮೇಘಾ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 35 ಸಾವಿರಕ್ಕೂ ಅಧಿಕ ಹಿಂಬಾಲಕರು ಫಾಲೋ ಮಾಡುತ್ತಾ ಇದ್ದಾರೆ.