
ಆ್ಯಂಕರ್ ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಾರಕ್ಕೆ ಒಂದು ಫೋಟೋ ಆದರೂ ಅವರು ಹಂಚಿಕೊಳ್ಳುತ್ತಾರೆ.

ಈ ಬಾರಿ ಅವರು ಎತ್ತರದ ಬೆಟ್ಟವೊಂದನ್ನು ಏರಿದ್ದಾರೆ. ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

‘ನಮ್ಮ ಸಂತೋಷ ನಾವೇ ಕಂಡುಕೊಳ್ಳಬೇಕು. ನಮ್ಮ ನಗು ನಮ್ಮನ್ನು ಮೊದಲು ಗೆಲ್ಲಬೇಕು. ಈ ಜಾಗ ಯಾವುದೆಂದು ಹೇಳುವಿರಾ’ ಎಂದಿದ್ದಾರೆ ಅನುಶ್ರೀ.

ಅನುಶ್ರೀ ಕೇಳಿದ ಪ್ರಶ್ನೆಗೆ ಫ್ಯಾನ್ಸ್ ಉತ್ತರ ನೀಡಿದ್ದಾರೆ. ‘ಕಾಫಿ ನಾಡು ಚಿಕ್ಕಮಗಳೂರಿನ ಸೊಬಗನ್ನು ವರ್ಣಿಸುವ ಕ್ಯಾತನಮಕ್ಕಿ ಗಿರಿ’ ಎಂಬ ಉತ್ತರ ಬಂದಿದೆ.

ಅನುಶ್ರೀ ಅವರು ಹಲವು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಜೀ ಕನ್ನಡದ ಅನೇಕ ರಿಯಾಲಿಟಿ ಶೋಗೆ ಅವರು ಆ್ಯಂಕರ್ ಆಗಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ನಂತರ ಅನುಶ್ರೀ ಸಾಕಷ್ಟು ದುಃಖಕ್ಕೆ ಒಳಗಾಗಿದ್ದಾರೆ.