- Kannada News Photo gallery Another one inter religion marriage In Chikkaballapur, Hindu Youth And Muslim girl Marry
ಹಿಂದೂ ಯುವಕನನ್ನ ಪ್ರೀತಿಸಿ ಮದ್ವೆಯಾದ ಮುಸ್ಲಿಂ ಯುವತಿ: ಧರ್ಮ ಮೀರಿದ ಪ್ರೇಮವಿವಾಹ
ಪ್ರೀತಿ ಕುರುಡು ಎನ್ನುವ ಹಾಗೆ ಜಾತಿ, ಧರ್ಮ, ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟಲೆಗಳನ್ನು ಮೀರಿದ ಜೋಡಿಯೊಂದು ಪ್ರೇಮ ವಿವಾಹವಾಗಿತ್ತು. ಎದುರು ಬದುರು ಮನೆಯ ಮಸ್ಲಿಂ ಯುವತಿ ಹಾಗೂ ಹಿಂದೂ ಯುವಕ ತಮ್ಮ-ತಮ್ಮ ಧರ್ಮ, ಜಾತಿಗೆ ತಿಲಾಂಜಲಿ ಇಟ್ಟು ಪೋಷಕರ ವಿರೋಧದ ನಡುವೆಯೇ ಸಪ್ತಪದಿ ತುಳಿದಿತ್ತು. ಆದ್ರೆ, ಈ ಪ್ರೇಮ ವಿವಾಹ ಎರಡೇ ವಾರಕ್ಕೆ ಮುರಿದು ಬಿದ್ದಿದ್ದು, ಪ್ರಿಯಕರನನ್ನು ನಡು ನೀರಿನಲ್ಲೇ ಬಿಟ್ಟು ಹೋಗಿದ್ದಳು. ಈ ಪ್ರಕರಣ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಅಂತರ್ ಧರ್ಮೀಯ ವಿವಾಹ ನಡೆದಿದ್ದು, ಪೋಷಕರ ತೀವ್ರ ವಿರೋಧದ ನಡುವೆಯೂ ಮುಸ್ಲಿಂ ಯುವತಿ ತನ್ನ ಪ್ರಿಯಕರನ್ನ ಬಿಟ್ಟುಕೊಡದೇ ಮದ್ವೆಯಾಗಿದ್ದಾಳೆ.
Updated on: May 16, 2025 | 5:04 PM

ಇಲ್ಲೊಂದು ಜೋಡಿ ಜಾತಿ- ಧರ್ಮಗಳ ಗೊಡೆ ಮೀರಿ ಪ್ರೇಮ ವಿವಾಹವಾಗಿದೆ. ಮುಸ್ಲಿಂ ಯುವತಿ-ಹಿಂದೂ ಯುವಕನೊರ್ವ ಪ್ರೀತಿಸಿ ಪ್ರೇಮವಿವಾಹವಾಗಿದ್ದಾರೆ. ಆದ್ರೆ ಯುವತಿಯ ಮನೆಯಲ್ಲಿ ತೀವ್ರ ವಿರೋಧ ವ್ಯೆಕ್ತವಾದ ಕಾರಣ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಹೀಗೆ ಜೊತೆ ಜೊತೆಯಾಗಿ ನಿನಗೆ ನಾನು ನನಗೆ ನೀನು ಅಂತ ನಿಂತಿರೋ ಈ ಜೋಡಿಯ ಹೆಸರು ನಜ್ಮಾ ಹಾಗೂ ಹರೀಶ್ ಬಾಬು. ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿಯ ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಯುವತಿ ನಜ್ಮಾ.

ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಸ್ನೇಹ ಪ್ರೀತಿ ಪ್ರೇಮವಾಗಿದೆ. ಬಳಿಕ ನಜ್ಮಾ ತಮ್ಮ ಕುಟುಂಬದವರ ವಿರೋಧದ ನಡುವೆಯೇ ಹರೀಶ್ನನ್ನು ಮದುವೆಯಾಗಿದ್ದಾಳೆ.

ಇಬ್ಬರು ಮದುವೆ ಮಾಡಿಕೊಳ್ಳೊದಾಗಿ ಎರಡು ಕಡೆಯ ಮನೆಯಲ್ಲಿ ತಿಳಿಸಿದ್ದಾರೆ. ಹರೀಶಬಾಬು ಮನೆಯಲ್ಲಿ ಒಪ್ಪಿದ್ದಾರೆ. ಆದ್ರೆ, ನಜ್ಮಾ ಮನೆಯಲ್ಲಿ ಒಪ್ಪದೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ಜೋಡಿ ಈ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಉಂಟಾದ ಪ್ರೀತಿ, ಇಬ್ಬರು ಸಪ್ತಪದಿ ತುಳಿಯುವ ಹಾಗೆ ಆಗಿದೆ. ಆದ್ರೆ ನಜ್ಮಾ ಅನ್ಯ ಧರ್ಮಿಯಳಾದ ಕಾರಣ ಈಗ ನವಜೋಡಿಗೆ ಭಯ ಬಂದಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡುವಂತೆ, ನವಜೋಡಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಮೊರೆ ಹೋಗಿದ್ದಾರೆ.

ಕುಟುಂಬದವರ ಜೊತೆ ಹೋಗಲ್ಲ. ನನಗೆ ಹರೀಶ್ ಬೇಕೆಂದು ನಜ್ಮಾ ಪೊಲೀಸರ ಮುಂದೆ ಖಡಕ್ ಆಗಿ ಹೇಳಿದ್ದಾಳೆ. ಇದ್ರಿಂದ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ನಜ್ಮಾ ಹೇಳಿಕೆ ದಾಖಲಿಸಿಕೊಂಡು ಆಕೆಯ ಇಷ್ಟದಂತೆ ಆಕೆಯ ಪ್ರೀಯಕರನ ಜೊತೆ ಕಳುಹಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮದ ಯುವಕನ ಜತೆ ವಿವಾಹಕ್ಕೆ ನಜ್ಮಾ ಪೋಷಕರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ನಜ್ಮಾಳನ್ನು ಮನವೊಲಿಸುವ ಪ್ರಯತ್ನ ಸಹ ಮಾಡಿದ್ದಾರೆ. ಆದ್ರೆ, ಇದ್ಯಾವುದಕ್ಕೂ ಬಗ್ಗದ ನಜ್ಮಾ, ಹರೀಶ್ ಬಾಬು ಜೊತೆ ಹೋಗುವುದಾಗಿ ಪೊಲೀಸರ ಮುಂದೇ ಹೇಳಿದ್ದಾಳೆ. ಬಳಿಕ ಪೊಲೀಸರು, ಈ ದಂಪತಿಗೆ ತೊಂದರೆ ಕೊಡದಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ.

ಅಂತರ್ ಧರ್ಮದ ಪ್ರೇಮ ವಿವಾಹದ ಸೂಕ್ಷ್ಮತೆಯನ್ನ ಅರಿತ ಪೊಲೀಸರು, ಎರಡು ಕಡೆಯ ಪೋಷಕರನ್ನು ಠಾಣೆಗೆ ಕರೆಸಿ ಎರಡು ಕಡೆ ಬುದ್ದಿವಾದ ಹೇಳಿದ್ದು, ನಜ್ಮಾ ಹೇಳಿಕೆಯಂತೆ ಆಕೆಗೆ ಕಾನೂನು ರಕ್ಷಣೆ ನೀಡಿ, ಆಕೆಯ ಪ್ರೀಯಕರ ಹರೀಶ್ ಬಾಬು ಜೊತೆ ಕಳುಹಿಸಿಕೊಟ್ಟಿದ್ದಾರೆ.




