ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್ಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ.
ಅನುಪಮಾ ಗೌಡ ಅವರು ಬಿಗ್ ಬಾಸ್ನಲ್ಲಿ ಸಮತೋಲನದ ಆಟ ಆಡುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.
ಅನಾವಶ್ಯಕ ಜಗಳ ಮಾಡಲು ಅನುಪಮಾ ಯಾವಾಗಲೂ ತೆರಳಿಲ್ಲ. ಅವರು ಹೆಚ್ಚು ನ್ಯಾಯಯುತವಾಗಿ ಆಡಲು ಇಷ್ಟಪಡುತ್ತಾರೆ.
ಬಿಗ್ ಬಾಸ್ನಲ್ಲಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಅನೇಕರು ಡಬಲ್ ಗೇಮ್ ಆಡುತ್ತಾರೆ. ಆದರೆ, ಅನುಪಮಾ ಗೌಡ ಎಂದಿಗೂ ಆ ರೀತಿಯ ಆಟ ಪ್ರದರ್ಶನ ಮಾಡಿಲ್ಲ.
ದೀಪಿಕಾ ದಾಸ್ ಜತೆ ಅನುಪಮಾ ಗೌಡಗೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಕಳೆದ ವೀಕೆಂಡ್ನಲ್ಲಿ ದೀಪಿಕಾ ಔಟ್ ಆದಾಗ ಸಾಕಷ್ಟು ಜನರಿಗೆ ಬೇಸರ ಆಗಿತ್ತು. ಈಗ ಅವರು ಮತ್ತೆ ಮರಳಿದ್ದು ಅನುಪಮಾಗೆ ಖುಷಿ ನೀಡಿದೆ.