
ಮಲಯಾಳಂನ ಪ್ರೇಮಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಅನುಪಮಾ ಪರಮೇಶ್ವರನ್. ಈಗ ಅವರು ಓಣಂ ಸಂಭ್ರಮದಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಮಲಯಾಳಂ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಅನುಪಮಾ ಗುರುತಿಸಿಕೊಂಡರು. ನಂತರ ಅವರಿಗೆ ಕನ್ನಡದಲ್ಲೂ ನಟಿಸೋಕೆ ಅವಕಾಶ ಸಿಕ್ಕಿತ್ತು.

ಪುನೀತ್ ರಾಜ್ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಕನ್ನಡಕ್ಕೂ ಕಾಲಿಟ್ಟರು. ಈ ಮೂಲಕ ಕನ್ನಡದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು.

ಸದ್ಯ ಅನುಪಮಾ ತೆಲುಗು ಹಾಗೂ ತಮಿಳಿನಲ್ಲಿ ತಲಾ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಎರಡನೆ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ನಿಧಾನವಾಗಿವೆ.

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್