
ಅನುಷ್ಕಾ ಶರ್ಮಾ ಅವರು ಒಂದು ದೊಡ್ಡ ಬ್ರೇಕ್ನ ಬಳಿಕ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. 2018ರಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಮದುವೆ ಆದರು. ವಿವಾಹದ ಬಳಿಕ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದರು ಅನುಷ್ಕಾ.

ಈಗ ಅನುಷ್ಕಾ ಶರ್ಮಾ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ದೀಪಾವಳಿ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ದೀಪಾವಳಿ ಹಿಂದೂಗಳ ಪಾಲಿಗೆ ವಿಶೇಷ ಹಬ್ಬ. ಎಲ್ಲರೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಅದೇ ರೀತಿ ಅನುಷ್ಕಾ ಕೂಡ ಹಬ್ಬ ಆಚರಿಸಿದ್ದಾರೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ಅಬ್ಬರದ ಆಟ ಪ್ರದರ್ಶನ ಮಾಡಿದ್ದರು. ಟಿ20 ವಿಶ್ವಕಪ್ನಲ್ಲಿ ಪಕ್ ವಿರುದ್ಧ್ ಅಜೇಯವಾಗಿ 82 ರನ್ ಹೊಡೆದಿದ್ದರು. ಈ ವೇಳೆ ಅನುಷ್ಕಾ ಪತಿಯ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು.

ಅನುಷ್ಕಾ ಶರ್ಮಾ ಅವರು ಸದ್ಯ ಕೋಲ್ಕತ್ತದಲ್ಲಿದ್ದಾರೆ. ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿಂದ ಅವರು ವಿರಾಟ್ ಕೊಹ್ಲಿ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ.
Published On - 6:30 am, Wed, 26 October 22