- Kannada News Photo gallery Kannada News | Apple Seeds: Are you eating seeds with apples? So the danger is not averted.
Apple Seeds: ಸೇಬು ಹಣ್ಣಿನೊಂದಿಗೆ ಬೀಜಗಳನ್ನು ತಿನ್ನುತ್ತಿದ್ದೀರಾ? ಹಾಗಾದ್ರೆ ಅಪಾಯ ತಪ್ಪಿದ್ದಲ್ಲ
ನಮ್ಮಲ್ಲಿ ಹೆಚ್ಚಿನವರು ಸೇಬು ಹಣ್ಣನ್ನು ಬೀಜ ತೆಗೆದು ತಿನ್ನುತ್ತಾರೆ. ಆದರೆ ಮತ್ತೆ ಕೆಲವರು ಬೀಜಗಳನ್ನೂ ತಿನ್ನುತ್ತಾರೆ. ಆದರೆ ಬೀಜ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು.
Updated on: May 26, 2023 | 8:55 PM

ಪ್ರತಿದಿನ ಒಂದು ಸೇಬು ತಿಂದರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ಅವರೇ ಹೇಳುವಂತೆ ಈ ಹಣ್ಣು ಪೋಷಕಾಂಶಗಳಿಂದ ಕೂಡಿದ್ದು, ಇದರಲ್ಲಿರುವ ವಿಟಮಿನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ.

ನಮ್ಮಲ್ಲಿ ಹೆಚ್ಚಿನವರು ಸೇಬು ಹಣ್ಣನ್ನು ಬೀಜ ತೆಗೆದು ತಿನ್ನುತ್ತಾರೆ. ಆದರೆ ಮತ್ತೆ ಕೆಲವರು ಬೀಜಗಳನ್ನೂ ತಿನ್ನುತ್ತಾರೆ. ಆದರೆ ಬೀಜ ತಿನ್ನುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ.

ಸೇಬು ಬೀಜಗಳು ಅಮಿಗ್ಡಾಲಿನ್ ಎಂಬ ವಿಷಕಾರಿ ಅಂಶವನ್ನು ಹೊಂದಿರುತ್ತದೆ. ಇದನ್ನು ತಿನ್ನುವಾಗ ಅಥವಾ ಅಗಿಯುವಾಗ, ಅಮಿಗ್ಡಾಲಿನ್ ಹೈಡ್ರೋಜನ್ ಸೈನೈಡ್ ಆಗಿ ಬದಲಾಗುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

ಸೇಬು ಬೀಜ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪದಂತೆ ತಡೆಯುತ್ತದೆ. ಸಣ್ಣ ಪ್ರಮಾಣದ ಸೈನೈಡ್ ದೇಹಕ್ಕೆ ಅಲ್ಪಾವಧಿ ಹಾನಿಯನ್ನು ಉಂಟುಮಾಡಬಹುದು. ಇದು ತಲೆನೋವು, ಆಯಾಸ, ಆಲಸ್ಯ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅಮಿಗ್ಡಾಲಿನ್ ಮಾರಣಾಂತಿಕವಲ್ಲದಿದ್ದರೂ, ಅದು ದೇಹಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಬೀಜಗಳನ್ನು ತೆಗೆದ ಸೇಬುಗಳನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.




