
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದರು. ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು.

ಇಂದು ಪುನೀತ್ ರಾಜ್ಕುಮಾರ್ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ವಿವಿಧ ರೀತಿಯಲ್ಲಿ ಅವರಿಗೆ ನಮನ ಸಲ್ಲಿಸುವ ಕಾರ್ಯ ಆಗುತ್ತಿದೆ.

ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಕಲಾವಿದೆಯೊಬ್ಬರು ಅಪ್ಪು ಅವರ ಸುಂದರ ಕಲಾಕೃತಿ ರಚಿಸಿದ್ದಾರೆ.

ಈ ಕಲಾಕೃತಿಯನ್ನು ರೂಪಾಲಿ ಎಂಬ ಆರ್ಟಿಸ್ಟ್ ರಚಿಸಿದ್ದಾರೆ. ಇದನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಅಪ್ಪು ನಿವಾಸದಲ್ಲಿ ಈ ಚಿತ್ರವೀಗ ಜಾಗ ಪಡೆದುಕೊಂಡಿದೆ.

ಅಭಿಮಾನಿ ನೀಡಿರುವ ಉಡುಗೊರೆಯನ್ನು ಅಶ್ವಿನಿ ಅವರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಚಿತ್ರ ರಚಿಸಿದ ಕಲಾವಿದೆಯ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಪಾರಿವಾಳ ಅಪ್ಪು ಹೆಗಲ ಮೇಲೆ ಕೂತಿರುವ ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತಿದೆ.
Published On - 2:49 pm, Sat, 29 October 22