
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಟಾಪ್ ಐದರಲ್ಲಿ ದಿವ್ಯಾ ಹೆಸರು ಇರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ಸೀಸನ್ನಲ್ಲಿ ಎರಡನೇ ರನ್ನರ್ ಅಪ್ ಆಗಿ ದಿವ್ಯಾ ಹೊರಹೊಮ್ಮಿದ್ದರು.

ದಿವ್ಯಾ ಉರುಡುಗ ಈ ಬಾರಿ ಕಪ್ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ವೇದಿಕೆ ಮೇಲೆ. ಸೀಸನ್ 8ರಲ್ಲಿ ಇವರು ಸ್ಪರ್ಧಿ ಆಗಿದ್ದರು. ಈ ಬಾರಿ ದಿವ್ಯಾ ಬಿಗ್ ಬಾಸ್ಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅರವಿಂದ್ ಕೆಪಿ ಅವರ ಜತೆಗೆ ಇಲ್ಲ.

ಫಿನಾಲೆ ಸಮೀಪಿಸಿರುವುದರಿಂದ ಅರವಿಂದ್ ಕೆ.ಪಿ. ಅವರು ದಿವ್ಯಾಗೆ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.

ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್ನಲ್ಲಿ ಮನೆ ಒಳಗೆ ಬಂದಿದ್ದರು. ಈ ಮೂಲಕ ದಿವ್ಯಾಗೆ ಸರ್ಪ್ರೈಸ್ ನೀಡಿದ್ದರು.