ಮನೆಯಲ್ಲೊಂದು ಆಫೀಸ್ನಂಥ ವ್ಯವಸ್ಥೆ, ಲೈಬ್ರರಿ, ರೀಡಿಂಗ್ ರೂಮ್, ಧ್ಯಾನಕ್ಕೆ ಕೋಣೆ ಹೀಗೆ ಆಲೋಚನೆ ಮಾಡುವಂಥ ಕನ್ಯಾ ರಾಶಿಯವರು ಬ್ರ್ಯಾಂಡ್, ಬಣ್ಣ, ವಸ್ತುಗಳ ಗುಣಮಟ್ಟ ಇಂಥ ವಿಚಾರಗಳಲ್ಲಿ ಬಹಳ ನಿರ್ದಿಷ್ಟವಾಗಿ ಇರುತ್ತಾರೆ. ಇಂಥದ್ದೇ ಬೇಕು ಅಂದರೆ ಅದಕ್ಕಾಗಿ ಹತ್ತಾರು ಅಂಗಡಿ ಬಾಗಿಲುಗಳನ್ನು ಹತ್ತಿಳಿದಿರುತ್ತಾರೆ. ಆದರೆ ಮನೆ ವಿಚಾರದಲ್ಲಿ ಇವರಿಗೆ ಶೇಕಡಾ ನೂರರಷ್ಟು ತೃಪ್ತಿ, ಸಮಾಧಾನ ಸಿಗುವುದೇ ಇಲ್ಲ.