- Kannada News Photo gallery Tattoo Designs: ಟ್ಯಾಟೂ ಹಾಕಿಸಿಕೊಳ್ಳಲು ಕೆಲವೊಂದಿಷ್ಟು ಸುಂದರ ಡಿಸೈನ್ಗಳು ಇಲ್ಲಿವೆ
Tattoo Designs: ಟ್ಯಾಟೂ ಹಾಕಿಸಿಕೊಳ್ಳಲು ಕೆಲವೊಂದಿಷ್ಟು ಸುಂದರ ಡಿಸೈನ್ಗಳು ಇಲ್ಲಿವೆ
First Tattoo: ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿಬಿಟ್ಟಿದೆ. ಮೊದಲ ಬಾರಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದಿದ್ದಾಗ ಸಿಂಪಲ್ ಡಿಸೈನ್ ಆರಿಸಿಕೊಳ್ಳಿ. ಕಣ್ ಸೆಳೆಯುವ ವಿವಿಧ ವಿನ್ಯಾಸವುಳ್ಳ ಡಿಸೈನ್ಗಳು ಇಲ್ಲಿವೆ.
Updated on:May 30, 2021 | 3:26 PM

attractive and simple tattoo designs check in kannada

ಕಾಲೇಜಿಗೆ ಹೋಗುವ ಯುವಕ/ಯುವರಿತರಂತೂ ಟ್ಯಾಟೂ ಹಾಕಿಕೊಳ್ಳಬೇಕೆಂದು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸ್ನೇಹಿತ ಗುಂಪಿನಲ್ಲಿ ಒಬ್ಬ ಹಚ್ಚೆ ಹಾಕಿಸಿಕೊಂಡರೆ ಸಾಕು, ನಾನೂ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬ ಆಸೆ. ಹಾಗಿದ್ದಾಗ ವಿವಿಧ ರೀತಿಯ ಡಿಸೈನ್ಗಳು ಇಲ್ಲಿವೆ. ನಿಮಗಿಷ್ಟವಾದಲ್ಲಿ ಇದೇ ರೀತಿಯ ಟ್ಯಾಟೂ ಡಿಸೈನ್ ಹಾಕಿಸಿಕೊಳ್ಳಬಹುದು.

ಸ್ನೇಹಿತ ಹಾಕಿಸಿಕೊಂಡ ಮಾತ್ರಕ್ಕೆ ನೀವೂ ಟ್ಯಾಟೂ ಹಾಕಿಸಿಕೊಳ್ಳಲೇ ಬೇಕು ಎಂಬ ಯೋಚನೆ ಬೇಡ. ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡ ಶಾಯಿ ಎಂದಿಗೂ ಮಾಸುವುದಿಲ್ಲ. ಅಚ್ಚಳಿಯದೇ ಉಳಿದಿರುತ್ತದೆ. ಹಾಗಿದ್ದಾಗ ನಿಮ್ಮ ಯೋಚನೆ ಸರಿಯಾಗಿರಲಿ. ನಿರ್ಧಾರ ತೆಗೆದುಕೊಳ್ಳುವಾಗ ಕೊಂಚ ಯೋಚಿಸಿ.

ದಿನ ಸಾಗುತ್ತಿದ್ದಂತೆಯೇ ಹೊಸ ಹೊಸ ಡಿಸೈನ್ಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಡಿಸೈನ್ ಕೂಡಾ ಕಣ್ ಸೆಳೆಯುವಂತಿರುತ್ತದೆ. ಒಂದು ಬಾರಿ ಟ್ಯಾಟೂ ಹಾಕಿಸಿಕೊಂಡ ಬಳಿಕ ಅದನ್ನು ಅಳಿಸುವುದು ಕಷ್ಟ. ಹಾಗಿದ್ದಾಗ ಮೊದಲ ಬಾರಿ ಸಿಂಪಲ್ ಡಿಸೈನ್ ಆಯ್ಕೆ ಮಾಡಿಕೊಳ್ಳಿ.

ನೀವು ಹಾಕಿಸಿಕೊಂಡಿರುವ ಡಿಸೈನ್ ಕಣ್ ಸೆಳೆಯುವಂತಿರಬೇಕು. ಟ್ಯಾಟೂ ಹಾಕಿಕೊಂಡ ಬಳಿಕ ನಿಮಗೆ ಖುಷಿ ಎನಿಸಬೇಕು. ನೋಡಲು ಸಿಂಪಲ್ ಆಗಿರಬೇಕು. ಅಂತಹ ಕೆಲವೊಂದು ಟ್ಯಾಟೂಗಳ ವಿನ್ಯಾಸ ಇಲ್ಲಿವೆ. ನಿಮಗಿಷ್ಟವಾದಲ್ಲಿ ಈಥರಹದ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
Published On - 3:24 pm, Sun, 30 May 21



















