
Ashika Ranganath: ಸ್ಯಾಂಡಲ್ವುಡ್ನಲ್ಲಿ ಪ್ರಸ್ತುತ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿರುವ ನಟಿಯ ಬತ್ತಳಿಕೆಯಲ್ಲಿ ಮತ್ತಷ್ಟು ಬಹುನಿರೀಕ್ಷಿತ ಸಿನಿಮಾಗಳಿವೆ.

2021ರಲ್ಲಿ ಆಶಿಕಾ ನಟಿಸಿದ್ದ ‘ಮದಗಜ’ ತೆರೆಕಂಡಿತ್ತು. ಅದರಲ್ಲಿ ಆಶಿಕಾ ಪಾತ್ರಪೋಷಣೆ ಗಮನ ಸೆಳೆದಿತ್ತು. ‘ಕೋಟಿಗೊಬ್ಬ 3’ ಹಾಗೂ ‘ಜೇಮ್ಸ್’ನಲ್ಲಿ ನಟಿ ಹೆಜ್ಜೆಹಾಕಿದ್ದರು.

ಆಶಿಕಾ ನಟನೆಯ ಬಹುನಿರೀಕ್ಷಿತ ಚಿತ್ರವಾದ ‘ಅವತಾರ ಪುರುಷ’ ಮೇ 6ರಂದು ರಿಲೀಸ್ ಆಗಲಿದೆ. ಶರಣ್, ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ.

‘ಗರುಡ’ ಸೇರಿದಂತೆ ಆಶಿಕಾ ಬತ್ತಳಿಕೆಯಲ್ಲಿ ಒಟ್ಟು 4 ಚಿತ್ರಗಳಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಆಶಿಕಾ, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿದೆ.

ಆಶಿಕಾ ರಂಗನಾಥ್