ಅಪ್ಪಟ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಚಂದನವನದಲ್ಲಿ ಒಳ್ಳೊಳ್ಳೆಯ ಪ್ರಾಜೆಕ್ಟ್ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.
‘ಮದಗಜ’, ‘ತಾಯಿಗೆ ತಕ್ಕ ಮಗ’, ‘ರ‍್ಯಾಂಬೊ 2’ ಮುಂತಾದ ಸಿನಿಮಾಗಳ ಮೂಲಕ ಆಶಿಕಾ ರಂಗನಾಥ್ ಜನಮನ ಗೆದ್ದಿದ್ದಾರೆ. ತಮ್ಮ ನಟನೆ ಮತ್ತು ಗ್ಲಾಮರ್ನಿಂದ ಅವರು ಮಿಂಚುತ್ತಿದ್ದಾರೆ.
ಆಶಿಕಾ ರಂಗನಾಥ್ ನಟನೆಯ ಬಹುನಿರೀಕ್ಷಿತ ‘ರೇಮೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದಲ್ಲಿ ಅವರು ಇಶಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ‘ರೇಮೋ’ಗೆ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ.
ಶರಣ್ ನಾಯಕತ್ವದ ‘ಅವತಾರ ಪುರುಷ’ ಚಿತ್ರಕ್ಕೂ ಆಶಿಕಾ ರಂಗನಾಥ್ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಆ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಿದೆ. ಕೊರೊನಾ ಕಾರಣದಿಂದ ರಿಲೀಸ್ ತಡವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಆ್ಯಕ್ಟೀವ್ ಆಗಿರುತ್ತಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಸದ್ಯ 14 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.
ಫೋಟೋಗಳ ಬಗ್ಗೆ ಆಶಿಕಾ ರಂಗನಾಥ್ ಅವರಿಗೆ ಕ್ರೇಜ್ ಇದೆ. ಆಗಾಗ ಅವರು ಬಗೆಬಗೆಯ ಫೋಟೋಶೂಟ್ ಮಾಡಿಸುತ್ತಾರೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.