Updated on: Mar 26, 2022 | 3:59 PM
ಬಾಲಿವುಡ್ ನಟಿ ಕೃತಿ ಸನೋನ್ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿದೆ. ಸಿನಿಮಾದಿಂದ ಸಿನಿಮಾಗೆ ಅವರು ಹೊಸಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಟಿಯಾಗಿ ಮಿಂಚಿದ್ದ ಮೀನಾ ಕುಮಾರಿ ಬಯೋಪಿಕ್ನಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಮೊದಲು ಮಧುಬಾಲ ಹಾಗೂ ಮೀನಾ ಕುಮಾರಿ ಬಯೋಪಿಕ್ನಲ್ಲಿ ನಟಿಸುವ ಬಗ್ಗೆ ಕೃತಿ ಸನೋನ್ ಇಚ್ಛೆ ವ್ಯಕ್ತಪಡಿಸಿದ್ದರು. ಈ ನಟಿಯರ ಬಗ್ಗೆ ಈಗಿನ ಜನರೇಷನ್ನವರಿಗೆ ಹೆಚ್ಚು ತಿಳಿದಿಲ್ಲ. ಈ ಕಾರಣಕ್ಕೆ ಅವರ ಬಯೋಪಿಕ್ ಸಿದ್ಧಗೊಳ್ಳಲಿ. ಅವರ ಬಗ್ಗೆ ಬಯೋಪಿಕ್ ಬಂದರೆ ನನಗೆ ಅವಕಾಶ ನೀಡಿ ಎಂದು ಕೋರಿದ್ದರು.
ಕಮಲ್ ಅಮ್ರೋಹಿ ಮಗ ತಾಜ್ದಾರ್ ಅಮ್ರೋಹಿ ಅವರು ಮೀನಾ ಕುಮಾರಿ ಕುರಿತು ಬಯೋಪಿಕ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಸಿನಿಮಾದಲ್ಲಿ ಕೃತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವನ್ನು ಚಿತ್ರತಂಡದವರು ಅಧಿಕೃತ ಮಾಡಬೇಕಿದೆ.
ಇತ್ತೀಚೆಗೆ ಕೃತಿ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ತೆರೆಗೆ ಬಂದಿತ್ತು. ಇದು ರಿಮೇಕ್ ಸಿನಿಮಾ. ಈ ಕಾರಣಕ್ಕೆ ಅಂತಹ ದೊಡ್ಡ ಓಪನಿಂಗ್ ಪಡೆದುಕೊಂಡಿಲ್ಲ.
ಕನ್ನಡದ ‘ಜೇಮ್ಸ್’ ಚಿತ್ರ ತೆರೆಕಂಡ ಒಂದು ದಿನದ ಬಳಿಕ ಈ ಚಿತ್ರ ತೆರೆಗೆ ಬಂದಿತ್ತು. ಈ ವಾರ ‘ಆರ್ಆರ್ಆರ್’ ಸಿನಿಮಾ ತೆರೆಗೆ ಬಂದಿದೆ. ಈ ಕಾರಣಕ್ಕೆ ‘ಬಚ್ಚನ್ ಪಾಂಡೆ’ ಚಿತ್ರಕ್ಕೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ.