ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇಂದಿನಿಂದ ಕ್ಯೂಆರ್ ಕೋಡ್ ಟಿಕೆಟ್!
KSRTC Bus QR Code Tickets: ಬಾಗಲಕೋಟೆ ಜಿಲ್ಲೆಯಾದ್ಯಂತ ಕೆಎಸ್ಆರ್ಟಿಸಿ ಬಸ್ಗಳಲ್ಲಿ (KSRTC Bus) ಇಂದಿನಿಂದ (ಫೆಬ್ರವರಿ 13) ಕ್ಯೂಆರ್ ಕೋಡ್ (QR Code Ticket) ಸೌಲಭ್ಯ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇಂಥದ್ದೊಂದು ವಿನೂತನ ಕ್ರಮ ಜಾರಿಗೆ ತರಲಾಗಿದೆ.
1 / 7
ನೂತನ ವ್ಯವಸ್ಥೆಯಿಂದಾಗಿ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಮೊತ್ತವನ್ನು ಪಾವತಿ ಮಾಡುವ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ.
2 / 7
ಬೀಳಗಿ ಕೆಎಸ್ಆರ್ಟಿಸಿ ಘಟಕದಲ್ಲಿ ಸಂಸ್ಥೆಯ ಅಧಿಕಾರಿಗಳಿಂದ ಕ್ಯೂಆರ್ ಕೋಡ್ ಟಿಕೆಟ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಮಹಾಂತೇ ಕಪ್ಲಿ ಉಪ ಗಣಕ ವ್ಯವಸ್ಥಾಪಕ, ವಾಯುವ್ಯ ಸಾರಿಗೆ ಕೇಂದ್ರ ಕಚೇರಿ ಹುಬ್ಬಳ್ಳಿ, ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿವ್ಹಿ ಮೇತ್ರಿ ಅವರಿಂದ ಚಾಲನೆ ದೊರೆಯಿತು.
3 / 7
ಎರಡು ದಿನಗಳ ಒಳಗಾಗಿ ಬಾಗಲಕೋಟೆ ಜಿಲ್ಲೆಯ ಎಂಟು ಘಟಕಗಳ ಎಲ್ಲ ಬಸ್ಗಳಲ್ಲೂ ಯುಪಿಐ ಸೇವೆ ಆರಂಭಗೊಳ್ಳಲಿದೆ. ಮೊದಲ ದಿನವಾದ ಇಂದು ಉದ್ಘಾಟನೆ ಬಳಿಲ ಬಸ್ ಏರಿ ಪ್ರಯಾಣಿಕರಿಗೆ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಬಗ್ಗೆ ಅಧಿಕಾರಿಗಳು ತಿಳಿ ಹೇಳಿದರು.
4 / 7
ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯಿಂದಾಗಿ ಪ್ರಯಾಣದ ವೇಳೆ ಚಿಲ್ಲರೆ ನೀಡುವ ಸಮಸ್ಯೆಯಿಂದ ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ಮುಕ್ತಿ ಸಿಗಲಿದೆ. ಜತೆಗೆ, ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜನವೂ ದೊರೆಯಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
5 / 7
ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯ ಪ್ರಯೋಜನವನ್ನು ಹೆಚ್ಚಿನವರು ಪಡೆದುಕೊಳ್ಳಬೇಕು. ಇದರಿಂದ ಡಿಜಿಟಲ್ ಪಾವತಿಗೆ ಉತ್ತೇಜನ ದೊರೆಯುತ್ತದೆ. ಜತೆಗೆ, ಚಿಲ್ಲರೆ ಸಮಸ್ಯೆಗೂ ಪರಿಹಾರ ದೊರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
6 / 7
ಎರಡು ದಿನಗಳ ಹಿಂದಷ್ಟೇ ಇಂಥದ್ದೇ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕದ ಬಸ್ಗಳಲ್ಲಿ ಜಾರಿಗೆ ತರಲಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಧಾರವಾಡ ಘಟಕದ ಇತರ ವಿಭಾಗಗಳಲ್ಲಿಯೂ ಈ ಸೇವೆಯನ್ನು ವಿಸ್ತರಿಸುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದರು.
7 / 7
ಮುಂದಿನ ಕೆಲವು ದಿನಗಳಲ್ಲಿ ಈ ವ್ಯವಸ್ಥೆ ರಾಜ್ಯದಾದ್ಯಂತ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಇದೀಗ ಬಾಗಲಕೋಟೆ ಹಾಗೂ ಧಾರವಾಡಗಳಲ್ಲಿ ವ್ಯವಸ್ಥೆ ಜಾರಿಯಾಗಿದ್ದು, ಪ್ರಯಾಣಿಕರಿಗೆ ಹಾಗೂ ನಿರ್ವಹಾಕರಿಗೆ ನೆರವಾಗುತ್ತಿದೆ.