ಬಾಳೆ ಇಳುವರಿಗೆ ಹೊಡೆತ ಬಿದ್ರು ಬಂಪರ್ ದರ: ಏಲಕ್ಕಿ ಬಾಳೆ ಕೆಜಿಗೆ ಎಷ್ಟು ಗೊತ್ತಾ?
ದಾವಣಗೆರೆ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ಹೆಚ್ಚಾಗಿ ಬೆಳೆಯುವುದು ಏಲಕ್ಕಿ ಬಾಳೆ. ಪಚ್ಚ ಬಾಳೆ ದೂರದ ಆಂಧ್ರಪ್ರದೇಶ, ತೆಲಂಗಾಣದಿಂದ ಬರುತ್ತದೆ. ಮೇಲಾಗಿ ಈಗ ಸಾಲು ಸಾಲು ಹಬ್ಬ, ಪೂಜೆಗಳಿವೆ. ಪೂಜೆಗೆ ಬಾಳೆ ಹಣ್ಣು ಬೇಕೇಬೇಕು. ಮಧ್ಯಮ ವರ್ಗದ ಜನ ಏಲಕ್ಕಿ ಬಾಳೆ ದರ ಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ದರ ಪಚ್ಚ ಬಾಳೆ ಹಣ್ಣು ಖರೀದಿಸುತ್ತಿರುವುದು ಮಾರುಕಟ್ಟೆಗೆಯಲ್ಲಿ ಕಂಡುಬಂದಿದೆ.
1 / 6
ಇಳುವರಿ ಕುಸಿದಿದೆ, ಆದರೂ ಬಾಳೆ ಹಣ್ಣಿಗೆ ಬಂಪರ್ ಬೆಲೆ ಬಂದಿದೆ. ಏಲಕ್ಕಿ ಬಾಳೆ ಒಂದು ಕೆಜಿಗೆ 130 ರೂ. ಹಾಗೂ ಪಚ್ಚಬಾಳೆ ಕೆಜಿಗೆ 80 ರೂ. ಇದೆ. ಬಾಳೆ ಇಳುವರಿ ಕುಸಿತ ಒಂದು ಕಡೆದಯಾದರೆ, ಸಾಲು ಸಾಲು ಹಬ್ಬಗಳು ಇನ್ನೊಂದು ಕಡೆ. ಹೀಗಾಗಿ ಬಾಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಇಳುವರಿಗೆ ಹೊಡೆತ ಬಿದ್ದರು ದರ ಮಾತ್ರ ಉತ್ತಮವಾಗಿ ಸಿಗುತ್ತಿದೆ ಎನ್ನುತ್ತಿದ್ದಾರೆ ರೈತರು.
2 / 6
ಕಳೆದ ವರ್ಷ ಇದೇ ಅವಧಿಯಲ್ಲಿ 20 ರಿಂದ 25 ರೂ. ಕೆಜಿ ಇದ್ದ ಏಲಕ್ಕಿ ಬಾಳೆ, ಈಗ 130ಕ್ಕೆ ತಲುಪಿದೆ. ಇಲ್ಲಿನ ರೈತರಿಂದ 60 ರಿಂದ 80 ರೂ. ಖರೀದಿಸುವ ಸಗಟುದಾರರು ಗ್ರಾಹಕರಿಗೆ ಮಾರಾಟ ಮಾಡುವುದು ಕೆಜೆ 130 ರೂ. ಇದೇ ರೀತಿ 20 ರೂ ದರವಿದ್ದ ಪಚ್ಚಬಾಳೆ ಈಗ ರೈತರಿಂದ 40 ರೂ ಖರೀದಿ ಮಾಡಿ ಗ್ರಾಹಕರಿಗೆ 80 ರೂ. ಮಾರಾಟ ಮಾಡುತ್ತಿದ್ದಾರೆ.
3 / 6
ವಿಶೇಷವಾಗಿ ದಾವಣಗೆರೆ ಜಿಲ್ಲೆಯ ಸೇರಿದಂತೆ ಬಹುತೇಕ ಕಡೆ ಹೆಚ್ಚಾಗಿ ಬೆಳೆಯುವುದು ಏಲಕ್ಕಿ ಬಾಳೆ. ಪಚ್ಚ ಬಾಳೆ ದೂರದ ಆಂಧ್ರಪ್ರದೇಶ, ತೆಲಂಗಾಣದಿಂದ ಬರುತ್ತದೆ. ಮೇಲಾಗಿ ಈಗ ಸಾಲು ಸಾಲು ಹಬ್ಬ, ಪೂಜೆಗಳಿವೆ. ಪೂಜೆಗೆ ಬಾಳೆ ಹಣ್ಣು ಬೇಕೇಬೇಕು. ಮಧ್ಯಮ ವರ್ಗದ ಜನ ಏಲಕ್ಕಿ ಬಾಳೆ ದರ ಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ದರ ಪಚ್ಚ ಬಾಳೆ ಹಣ್ಣು ಖರೀದಿಸುತ್ತಿರುವುದು ಮಾರುಕಟ್ಟೆಗೆಯಲ್ಲಿ ಕಂಡುಬಂದಿದೆ.
4 / 6
ಬಹುತೇಕರಿಗೆ ಗೊತ್ತಿಲ್ಲ. ಬಾಳೆ ಬೆಳೆದ ರೈತರ ಕೈಗೆ ಸಿಗುವುದು ಸ್ವಲ್ಪ ಮಾತ್ರ. ಕಾರಣ ಬಹುತೇಕ ವ್ಯಾಪಾರಿಗಳು ಹಸಿ ಬಾಳೆ ಹಣ್ಣು ಖರೀದಿಸುತ್ತಾರೆ. ಹೀಗೆ ಖರೀದಿಸಿದ ಬಾಳೆಯನ್ನ ಗೋದಾಮಿನಲ್ಲಿ ಎರಡರಿಂದ ಮೂರು ದಿನ ಇಟ್ಟು ಹಣ್ಣು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ರೈತರಿಂದ 60 ರೂ. ಕೆಜಿಗೆ ಖರೀದಿ ಮಾಡಿದರೆ ಗ್ರಾಹಕರಿಗೆ ಮಾರಾಟ ಮಾಡುವುದು 120 ರೂ. ಇದೇ ಪದ್ದತಿ ನಡೆದುಕೊಂಡು ಬಂದಿದೆ.
5 / 6
ವರ್ಷವಿಡಿ ದುಡಿದ ರೈತನಿಗೂ ಅಷ್ಟೇ ಹಣ. ಮೂರು ದಿನ ತಂದಿಟ್ಟು ಹಣ್ಣು ಹಾಕಿದ ಮಾರಾಟಗಾರರಿಗೂ ಅಷ್ಟೇ ಹಣ. ಈ ಸಲ ದರ ಜಾಸ್ತಿ ಆಗಲು ಕಾರಣ ಹೆಚ್ಚಾಗಿ ಮಳೆಯಾದ ಹಿನ್ನೆಲೆ ಶೇಕಡ 50 ರಷ್ಟು ಇಳುವರಿ ಕುಸಿದೆ. ಒಂದು ಕಡೆ ರೈತರಿಗೆ ಸಮಾಧಾನವಾದರೆ ಒಂದು ಕಡೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
6 / 6
ಹೀಗೆ ಬೇರೆ ಬೇರೆ ಕಡೆಯಿಂದ ಬಾಳೆ ಹಣ್ಣು ರಾಜ್ಯದ ಬಹುತೇಕ ಮಾರಾಕಟ್ಟೆಗೆ ಬರುತ್ತದೆ. ಈಗ ಗೌರಿ ಗಣೇಶ್, ದಸರಾ, ದೀಪಾವಳಿ ಹಬ್ಬ ಆಗಮಿಸುತ್ತಿದ್ದು, ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಈಗಿರುವ ಬೆಳೆ ಬಿಟ್ಟು ಹೊಸ ಬೆಳೆ ಬಂದ್ರು ದರ ಸ್ವಲ್ಪ ಕಡಿಮೆ ಆಗಬಹುದು. ಆದರೆ ಈಗ ಮಾತ್ರ ಬಾಳೆ ಹಣ್ಣಿನ ಬೆಲೆ ಬಿಸಿ ತಟ್ಟಿಯೇ ತಟ್ಟುತ್ತದೆ. ಕಾರಣ ಇಳುವರಿಯೇ ಇಲ್ಲ.