Bandipur Tiger Reserve no.1 for the Karnataka state Expected to get the second position in country Chamarajanagar news in kannada
Bandipur Tiger Reserve no.1 for the Karnataka state Expected to get the second position in country Chamarajanagar news in kannada
ಎನ್ಟಿಸಿಎ, ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಎಂಒಎಫ್ ಎಂಬ ಮೂರು ಸಂಸ್ಥೆಗಳು ಸೇರಿ ಭಾರತ ದೇಶದಲ್ಲಿನ ಸಂರಕ್ಷಿತಾರಣ್ಯಗಳ ಆಡಳಿತಾತ್ಮಕ ಮೌಲ್ಯಮಾಪನ ನಡೆಸಿದ್ದು, ಇದರಲ್ಲಿ ಶೇ 97.6 ರಷ್ಟು ಅಂಕಗಳನ್ನು ಕರ್ನಾಟಕದ ಚಾಮರಾಜನಗರದಲ್ಲಿರುವ ಬಂಡೀಪುರ ಹುಲಿಸಂರಕ್ಷಿತಾರಣ್ಯಕ್ಕೆ ಲಭಿಸಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಸೇರಿ ಮೂರು ಸಂಸ್ಥೆಗಳು ಒಗ್ಗೂಡಿ ದೇಶದ ಎಲ್ಲಾ ಹುಲಿಸಂರಕ್ಷಿತಾರಣ್ಯದಲ್ಲೂ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಡಳಿತಾತ್ಮಕ ಮೌಲ್ಯಮಾಪನ ನಡೆಸಲಾಗುತ್ತದೆ.
ಇದೀಗಾ ನಾಲ್ಕು ವರ್ಷದ ನಂತರ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ನಾಗರಹೊಳೆ, ದಾಂಡೇಲಿ, ಭದ್ರಾ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಿಗೆ ಬಂಡೀಪುರ ಸೆಡ್ಡು ಹೊಡೆದಿದ್ದು ಮೌಲ್ಯಮಾಪನದಲ್ಲಿ ಶೇ 97.6 ರಷ್ಟು ಅಂಕ ಪಡೆದಿದೆ.
ಮೌಲ್ಯಮಾಪನದ ಅನ್ವಯ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತಾರಣ್ಯಗಳಿಗಿಂತಾ ಹೆಚ್ಚಿನ ಅಂಕ ಬಂದಿದ್ದು ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.
ಇನ್ನೂ ಸಂರಕ್ಷಿತಾರಣ್ಯದ ಮೌಲ್ಯಮಾಪನ ನಡೆಸಲು ನಿವೃತ್ತ ಐಎಫ್ಎಸ್, ಸೈಂಟಿಸ್ಟ್ಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡ 64 ಅಂಶಗಳನ್ನು ಇಟ್ಟುಕೊಂಡು ಮೌಲ್ಯಮಾಪನ ನಡೆಸುತ್ತಿದೆ. ಹೇಗೆ ಅರಣ್ಯವನ್ನು ಸಂರಕ್ಷಣೆ ಮಾಡ್ತಿದ್ದಾರೆ? ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಸಿಕ್ಕಿದೆಯಾ? ಆಡಳಿತಾತ್ಮಕ ಕೆಲಸ ಹೇಗಿವೆ? ಟೂರಿಸಂಗೆ ಅನುಕೂಲವಿದೆಯಾ ಹೀಗೆ ಹಲವು ಅಂಶಗಳ ಆಧಾರದ ಮೇಲೆ ಅಂಕ ನೀಡಿದ್ದಾರೆ.
ಅದರಂತೆ, ಬಂಡೀಪುರಕ್ಕೆ 97.5 ರಷ್ಟು ಅಂಕ ಲಭಿಸಿದ್ದು, ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನು ದೇಶದಲ್ಲಿಯೂ ಕೂಡ ಒಂದು ಅಥವಾ ಎರಡನೇ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ವನ್ಯ ಪ್ರಿಯರ ಆಕರ್ಷಣಾ ತಾಣವಾಗಿರುವ ಬಂಡೀಪುರಕ್ಕೆ ಶೀಘ್ರದಲ್ಲಿಯೇ ಮತ್ತೊಂದು ಗರಿ ಸಿಗಲಿದ್ದು, ರಾಜ್ಯದಂತೆ ದೇಶದಲ್ಲಿಯೂ ಕೂಡ ಮೌಲ್ಯಮಾಪನದ ರೇಟಿಂಗ್ನಲ್ಲಿ ನಂ.1 ಸ್ಥಾನ ಪಡೆಯಲಿ ಎನ್ನುವುದೇ ನಮ್ಮ ಆಶಯ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ)
Published On - 9:36 am, Thu, 17 November 22