ಟ್ರಪ್ ಎಫೆಕ್ಟ್​: ಬೆಂಗಳೂರಿಗರನ್ನು ಬಿಟ್ಟುಬಿಡದೇ ಕಾಡುತ್ತಿದೆ ಮಳೆ, ಇಂದು ಸಹ ಹಲವೆಡೆ ಮಳೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2024 | 5:23 PM

ಇನ್ನೊಂದು ವಾರ ಬೆಂಗಳೂರಿನಲ್ಲಿ ಮಳೆ ಆಗುತ್ತೆ ಅಂತ ತಜ್ಞರು ಎಚ್ಚರಿಸಿದ್ದಾರೆ. ಹಿಗಾಗಿ ಸಿಟಿ ಮಂದಿ ಸ್ಪಲ್ಪ ಎಚ್ಚರಿಕೆಯಿಂದ ಇರಬೇಕಾಗಿದೆ. ಬೆಂಗಳೂರಲ್ಲಿ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಬಹುತೇಕ ರಸ್ತೆಗಳಲ್ಲಿ ನೀರು ನಿಂತುಕೊಂಡ ಪರಿಣಾಮ ಸವಾರರು ಪರದಾಡಿದ್ದಾರೆ.

1 / 5
ಬಂಗಾಲ ಉಪಸಾಗರದಲ್ಲಿ ಟ್ರಪ್ ಎಫೆಕ್ಟ್​​ನಿಂದ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಇನ್ನೊಂದು ವಾರ ಮಳೆಯಾಗಲಿದೆ. ನಗರದಲ್ಲಿ ಅಕ್ಟೋಬರ್ 7 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಇತ್ತೀಚೆಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಆಗುತ್ತಿದ್ದು, ಜನರು ಹೈರಾಣಾಗಿದ್ದಾರೆ.

2 / 5
ಮಧ್ಯಾಹ್ನವಾಗುತ್ತಿದ್ದಂತೆ ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟ ವರುಣ, ಕೆಆರ್​ ಮಾರುಕಟ್ಟೆ, ಕಾರ್ಪೋರೇಷನ್, ಮೈಸೂರ್ ರೋಡ್, ಚಾಮರಾಜಪೇಟೆ, ಗಾಂಧಿಬಜಾರ್​​ ಸುತ್ತ ಮುತ್ತ ಮಳೆ ಸುರಿದಿದೆ. ಮಳೆಗೆ ವಾಹನ ಸಾವರರು ಪರದಾಡಿದ್ದಾರೆ.

3 / 5
ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ನೀರು ನಿಂತುಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಎನ್ನುತ್ತಿದ್ದಾರೆ ಸ್ಥಳೀಯರು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೆ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

4 / 5
ಮಳೆ ಅವಾಂತರಕ್ಕೆ ಸಿಟಿ ಜನ ಹೈರಾಣಾಗಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮರ ಧರೆಗುರುಳಿದ್ದು, ಕಾರುಗಳ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ.

5 / 5
ಹೆಣ್ಣೂರು ಮುಖ್ಯೆ ರಸ್ತೆಯ ವಡ್ಡರಪಾಳ್ಯ ಬಳಿ ಮಳೆ ನೀರು ನಿಂತಿದ್ದು, ನಿಧಾನವಾಗಿ ಸಂಚರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸ್​ ಮನವಿ ಮಾಡಿದ್ದಾರೆ.