- Kannada News Photo gallery Banks offer festive FD rates pick one that suits you SBI HDFC Bank Karnataka Bank IDFC
FD Rates: ಎಫ್ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್ಗಳ ಎಫ್ಡಿ ದರ ವಿವರ ಇಲ್ಲಿದೆ
ಹಬ್ಬದ ಅವಧಿಯಲ್ಲಿ (SBI), ಎಚ್ಡಿಎಫ್ಸಿ ಬ್ಯಾಂಕ್ (HDFC Bank), ಐಡಿಬಿಐ ಬ್ಯಾಂಕ್ (IDBI) ಸೇರಿದಂತೆ ಅನೇಕ ಬ್ಯಾಂಕ್ಗಳು ಗ್ರಾಹಕರ ಸ್ಥಿರ ಠೇವಣಿಗೆ (FD) ವಿಶೇಷ ಬಡ್ಡಿ ದರದ ಕೊಡುಗೆಗಳನ್ನು ನೀಡುತ್ತಿವೆ. ಆರ್ಬಿಐ ರೆಪೊ ದರ ಹೆಚ್ಚಿಸಿದಂತೆಲ್ಲ ಬ್ಯಾಂಕ್ಗಳೂ ಬಡ್ಡಿ ದರ ಹೆಚ್ಚಿಸುತ್ತಿವೆ. ಅದರಂತೆ ಕೆಲವು ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸಿವೆ. ವಿವಿಧ ಬ್ಯಾಂಕ್ಗಳ ಬಡ್ಡಿ ದರ ವಿವರ ಇಲ್ಲಿದೆ.
Updated on:Oct 29, 2022 | 4:13 PM

SBI Business Scheme: Invest Rupees 5 lakh once, earn up to Rupees 70000 per month sitting at home; Check details personal finance news in Kannda

Banks offer festive FD rates pick one that suits you SBI HDFC Bank Karnataka Bank IDFC

ಐಡಿಎಫ್ಸಿ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಯೆಸ್ ಬ್ಯಾಂಕ್ಗಳು ಎಫ್ಡಿ ಮೇಲೆ ಶೇಕಡಾ 7.25ರ ವರೆಗೆ ಬಡ್ಡಿ ನೀಡುತ್ತಿವೆ. ಇದರಲ್ಲಿ ಠೇವಣಿ ಅವಧಿ ಕ್ರಮವಾಗಿ 750 ದಿನಗಳು, 725 ದಿನಗಳು ಮತ್ತು 20-22 ತಿಂಗಳುಗಳು ಆಗಿವೆ.

ಖಾಸಗಿ ಬ್ಯಾಂಕ್ಗಳ ಪೈಕಿ ಫೆಡರಲ್ ಬ್ಯಾಂಕ್ 700 ದಿನಗಳವರೆಗಿನ ಅವಧಿಯ ಎಫ್ಡಿಗೆ ಶೇಕಡಾ 7.5ರ ಬಡ್ಡಿ ನೀಡುತ್ತಿದೆ. 888 ದಿನಗಳ ಅವಧಿಯ ಠೇವಣಿಗೆ ಶೇಕಡಾ 7.50ರ ಬಡ್ಡಿ ದರ ನಿಗದಿಪಡಿಸಿದೆ.

ಕರ್ನಾಟಕ ಬ್ಯಾಂಕ್ 555 ದಿನಗಳ ವರೆಗಿನ ಅವಧಿಯ ಎಫ್ಡಿಗೆ ಶೇಕಡಾ 7.20ರ ಬಡ್ಡಿ ನೀಡುತ್ತಿದೆ.

ಸಿಟಿ ಯೂನಿಯನ್ ಬ್ಯಾಂಕ್ 700 ದಿನಗಳ ವರೆಗಿನ ಅವಧಿಯ ಎಫ್ಡಿಗೆ ಶೇಕಡಾ 7.10ರ ಬಡ್ಡಿ ನಿಗದಿಪಡಿಸಿದೆ.
Published On - 4:11 pm, Sat, 29 October 22




