Updated on: Aug 30, 2022 | 1:10 PM
ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಅವರು ಸಾಲು ಸಾಲು ಸೋಲು ಅನುಭವಿಸಿದ್ದಾರೆ. ಆ ಬೇಸರವನ್ನು ಬದಿಗೊತ್ತಿ ಮುಂದಿನ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದಾರೆ.
ಸಿನಿಮಾಗಳು ಸೋತಿದ್ದರೂ ಕೂಡ ಪೂಜಾ ಹೆಗ್ಡೆ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರು ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗುತ್ತಿದ್ದಾರೆ.
ಜಾಹೀರಾತು ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಪೂಜಾ ಹೆಗ್ಡೆ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಆ ಮೂಲಕ ಅವರು ಕೈ ತುಂಬ ಸಂಭಾವನೆ ಪಡೆಯುತ್ತಾರೆ.
ಸದ್ಯ ಸಿನಿಮಾ ಕೆಲಸಗಳಿಂದ ಸಣ್ಣ ಬಿಡುವು ಪಡೆದುಕೊಂಡಿರುವ ಪೂಜಾ ಹೆಗ್ಡೆ ಅವರು ಮನೆಯಲ್ಲಿ ಹಾಯಾಗಿ ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ತಮಿಳು, ತೆಲುಗು ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.
Published On - 1:10 pm, Tue, 30 August 22