- Kannada News Photo gallery Belagavi BJP Leaders Special gift to narendra modi belagavi artist creates Jaggery modi statue
Narendra Modi: ಬೆಳಗಾವಿ ಬಿಜೆಪಿ ನಾಯಕರಿಂದ ಪ್ರಧಾನಿ ನರೇಂದ್ರ ಮೋದಿಗೆ ವಿಭಿನ್ನ ಗಿಫ್ಟ್, ಬೆಲ್ಲದಿಂದ ತಯಾರಾದ ಮೋದಿ ಪ್ರತಿಮೆ
ಕುಡಚಿ ಭಾಗದಲ್ಲಿ ಬೆಲ್ಲ ಹೆಚ್ಚು ಉತ್ಪಾದನೆ ಹಿನ್ನೆಲೆ ರಾಯಬಾಗ ಮೂಲದ ಬಾಬುರಾವ್ ನಿಡೋಣಿ ಅವರು ಬೆಲ್ಲದಲ್ಲೇ ಸಿದ್ದಪಡಿಸಿರುವ ಪ್ರಧಾನಿ ಮೋದಿಯವರ ಭಾವಚಿತ್ರ ಬಿಡಿಸಿರುವುದನ್ನ ಕಾಣಿಕೆಯಾಗಿ ನೀಡಲು ಸಿದ್ಧತೆ ನಡೆದಿದೆ.
Updated on:Apr 29, 2023 | 11:43 AM

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ಪ್ರಚಾರ, ರೋಡ್ ಶೋ, ಸಭೆಗಳನ್ನು ನಡೆಸುತ್ತಿದ್ದಾರೆ. ಇಂದು ಬೆಳಗಾವಿಗೆ ಆಗಮಿಸುವ ಹಿನ್ನೆಲೆ ವಿಶೇಷ ಉಡುಗೊರೆ ಸಿದ್ದವಾಗಿದೆ.

ಇಂದು ಪ್ರಧಾನಿ ಮೋದಿ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರಿಗೆ ವಿಭಿನ್ನ ಗಿಫ್ಟ್ ನೀಡಲು ಸ್ಥಳೀಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಕುಡಚಿ ಭಾಗದಲ್ಲಿ ಬೆಲ್ಲ ಹೆಚ್ಚು ಉತ್ಪಾದನೆ ಹಿನ್ನೆಲೆ ರಾಯಬಾಗ ಮೂಲದ ಬಾಬುರಾವ್ ನಿಡೋಣಿ ಅವರು ಬೆಲ್ಲದಲ್ಲೇ ಸಿದ್ದಪಡಿಸಿರುವ ಪ್ರಧಾನಿ ಮೋದಿಯವರ ಭಾವಚಿತ್ರ ಬಿಡಿಸಿರುವುದನ್ನ ಕಾಣಿಕೆಯಾಗಿ ನೀಡಲು ಸಿದ್ಧತೆ ನಡೆದಿದೆ.

ಮತ್ತು ಪ್ರಧಾನಿ ಮೋದಿ ಜಾರಿಗೆ ತಂದ ರಾಷ್ಟ್ರೀಯ ಯೋಜನೆಗಳನ್ನ ಒಳಗೊಂಡ ಪೇಂಟಿಂಗ್ ಕಾಣಿಕೆ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದ ಮೋದಿಯವರಿಗೆ ಬಸವಣ್ಣನವರ ಫೋಟೋ ನೀಡಿ ಬಿಜೆಪಿ ನಾಯಕರು ಸನ್ಮಾನಿಸಿದರು.

ವಿಜಯಪುರಕ್ಕೆ ಭೇಟಿ ನೀಡಲಿರುವ ಮೋದಿಗೆ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರ, ಮತ್ತು ಅವರು ಬರೆದಿದ್ದ “ಅಂತಿಮ ಅಭಿವಂದನ ಪತ್ರ” ವಿಲ್ ಪ್ರತಿ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
Published On - 11:43 am, Sat, 29 April 23
























