AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Energy Week: ಇಂಡಿಯಾ ಎನರ್ಜಿ ವೀಕ್​ನಲ್ಲಿ ಗಮನ ಸೆಳೆದ ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಬಾರಿ ಒಲೆಕ್ಟ್ರಾ ಕಂಪನಿಯ ವಿದ್ಯುತ್ ಚಾಲಿತ ಟಿಪ್ಪರ್ ಇಂಡಿಯಾ ಎನರ್ಜಿ ವೀಕ್​ನಲ್ಲಿ ಹೆಚ್ಚು ಗಮನಸೆಳೆದಿದೆ.

TV9 Web
| Edited By: |

Updated on:Feb 06, 2023 | 10:34 PM

Share
Bengaluru BIEC PM Modi inaugurated India Energy Week Electric-powered tipper that caught attention details in kannada

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಉದ್ಘಾಟನೆಗೊಂಡಿದೆ. ಇಂಧನ ಸಪ್ತಾಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದು, ವಸ್ತುಪ್ರದರ್ಶನ ಮಳಿಗೆಗಳು ಈ ಬಾರಿಯ ಮುಖ್ಯ ಹೈಲೈಟ್ಸ್. ಇಂಡಿಯಾ ಎನರ್ಜಿ ವೀಕ್​ನಲ್ಲಿ ಈ ಬಾರಿ ಗಮನ ಸೆಳೆಯುತ್ತಿರುವುದು ಒಲೆಕ್ಟ್ರಾ ಕಂಪನಿಯ ವಿದ್ಯುತ್ ಚಾಲಿತ ಟಿಪ್ಪರ್.

1 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಬೆಂಗಳೂರಿನ ರಸ್ತೆಗಳಲ್ಲಿ ವಿದ್ಯುತ್ ಚಾಲಿತ ಸ್ಕೂಟರ್ ಬೈಕ್​ಗಳು ಸಾಮಾನ್ಯವಾಗಿವೆ. ವಿದ್ಯುತ್ ಚಾಲಿತ ಕಾರುಗಳು ಕೂಡ ಕಡಿಮೆಯೇನಿಲ್ಲ. ಆದರೆ ಇದೀಗ ಮತ್ತೊಂದು ಗಮನಾರ್ಹ ವಿಚಾರ ಅಂದರೆ ಅದು ವಿದ್ಯುತ್ ಚಾಲಿತ ಹೆವಿ ಟಿಪ್ಪರ್​ಗಳು. ಸಂಪೂರ್ಣವಾಗಿ ಇಲೆಕ್ಟ್ರಿಕ್ ಟಿಪ್ಪರ್​ಗಳನ್ನು ರಸ್ತೆಗೆ ಇಳಿಸುವುದಕ್ಕೆ ಒಲೆಕ್ಟ್ರಾ ಕಂಪನಿ ಸಿದ್ದವಾಗಿದ್ದು, ಇಂಡಿಯಾ ಎನರ್ಜಿ ವೀಕ್​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

2 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಸುಮಾರು 85 ಕಿ.ಮೀ.ನಷ್ಟು ಹೈ ಸ್ಪೀಡ್ ಕೆಪ್ಯಾಸಿಟಿ ಹೊಂದಿರುವ ಇಲೆಕ್ಟ್ರಿಕ್ ಟಿಪ್ಪರ್ 6 ಗಂಟೆ ಫುಲ್ ಚಾರ್ಜ್ ಮಾಡಿದರೆ ಸಾಕು ಸುಮಾರು 220 ಕಿ.ಮೀ.ನಷ್ಟು ದೂರ ಹೆವಿ ಡ್ಯೂಟಿ ಮಾಡುವುದಕ್ಕೆ ಟಿಪ್ಪರ್ ರೆಡಿಯಾಗತ್ತದೆ. ಒಲೆಕ್ಟ್ರಾ ಕಂಪನಿ ಹೆವಿ ವೆಹಿಕಲ್ ಇವಿ ಟಿಪ್ಪರ್ ತರುವ ಮೊದಲು ಇಲೆಕ್ಟ್ರಿಕ್ ಬಸ್ಸುಗಳ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

3 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಈಗಾಗಲೇ ವಿವಿಧ ರಾಜ್ಯಗಳಲ್ಲಿ ಒಲೆಕ್ಟ್ರಾ ಕಂಪನಿಯ ಸಾವಿರಕ್ಕೂ ಹೆಚ್ಚು ಇ.ವಿ ಬಸ್ಸುಗಳು ಸಾರ್ವಜನಿಕರ ಸೇವೆ ಮಾಡುತ್ತಿವೆ. ಜನರು ಸಾಮಾನ್ಯವಾಗಿ ಯೋಚಿಸೋದು ಇ.ವಿ ವೆಹಿಕಲ್​ಗಳು ಹೆಚ್ಚಿನ ದೂರ ಸಾಗಾಟ ಮಾಡುವುದಕ್ಕೆ ಸಾಧ್ಯವಿಲ್ಲವೇನೋ? ಅಂತ. ಆದರೆ ಬಸ್ಸುಗಳನ್ನೇ ರಸ್ತೆಗೆ ಇಳಿಸಿ ದಾಖಲೆ ಬರೆದಿದ್ದ ಎಂಇಐಎಲ್ ಕಂಪನಿಯ ಸಹೋದರ ಸಂಸ್ಥೆ ಒಲೆಕ್ಟ್ರಾ ಇದೀಗ ಟಿಪ್ಪರ್ ನಂತಹ ಹೆವಿ ವೆಹಿಕಲ್ ಕೂಡ ನಿರ್ಮಾಣ ಮಾಡಿ ದಾಖಲೆ ಬರೆಯಲು ಹೊರಟಿದೆ.

4 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಇಂಡಿಯಾ ಎನರ್ಜಿ ವೀಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇ.ವಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಭರವಸೆ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಇ.ವಿ ವೆಹಿಕಲ್​ಗಳು ಪ್ರಮುಖವಾಗಿವೆ. ಇದಕ್ಕೆ ಇಲೆಕ್ಟ್ರಿಕ್ ಟಿಪ್ಪರ್​ಗಳ ಕೊಡುಗೆ ಬಹಳ ದೊಡ್ಡದಿದೆ.

5 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಇಲೆಕ್ಟ್ರಿಕ್ ಟಿಪ್ಪರ್​ಗಳನ್ನು ಜಲಸಂಪನ್ಮೂಲ, ಗಣಿಗಾರಿಕೆ ಸೇರಿದಂತೆ ಯಾವುದೇ ಬೃಹತ್ ಉದ್ಯಮಗಳಿಗೂ ಬಳಕೆ ಮಾಡಿಕೊಳ್ಳಬಹುದು. ಇಂಡಿಯಾ ಎನರ್ಜಿ ವೀಕ್ ಒಲೆಕ್ಟ್ರಾ ಕಂಪನಿಯ ಕಾರಣದಿಂದಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. (ವರದಿ: ಪ್ರಸನ್ನ ಗಾಂವ್ಕರ್)

6 / 6

Published On - 10:16 pm, Mon, 6 February 23