ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ ಎಂದು ನಿಮಗೆ ತಿಳಿದಿದೆಯೇ? ಯುಗಗಳ ಹಿಂದೆ ನಗರವನ್ನು ಯೋಜಿಸಿದಾಗ, ಒಂದು ಮರದಲ್ಲಿ ಹೂಗಳು ಅರಳುವುದು ನಿಂತಾಗ, ಇನ್ನೊಂದು ಮರವು ಅದರ ಸ್ಥಾನವನ್ನು ಪಡೆದುಕೊಳ್ಳುವ ರೀತಿಯಲ್ಲಿ ಮರಗಳನ್ನು ಆರಿಸಲಾಯಿತು. ಬೆಂಗಳೂರು ಹವಾಮಾನವನ್ನು ಹೊಗಳುವ ಬೆಂಗಳೂರಿಗರು ವರ್ಷ ಪೂರ್ತಿ ಇಲ್ಲಿನ ಪರಿಸರ, ವೈವಿಧ್ಯಮಯ ಹೂಗಳನ್ನು ಕಣ್ತುಂಬಿಕೊಳ್ಳಬಹುದು.