- Kannada News Photo gallery Bengaluru Ganavi And sooraj death case: here Is Reasons why She Death after Came from Srilanka honeymoon trip
ಗಾನವಿ-ಸೂರಜ್ ಪ್ರಕರಣ: ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಗಾನವಿ ಹಾಗೂ ಸೂರಜ್ ಮದ್ವೆ ಬಳಿಕ ಹನಿಮೂನ್ಗೆಂದು ಶ್ರೀಲಂಕಾಕ್ಕೆ ತೆರಳಿದ್ದರು. ಆದ್ರೆ, ಗಾನವಿ ಹನಿಮೂನ್ ಟ್ರಿಪ್ ಅರ್ಧದಲ್ಲೇ ಮುಗಿಸಿಕೊಂಡು ಬಂದು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಗಾನವಿ ಕುಟುಂಬಸ್ಥರು, ಪತಿ ಸೂರಜ್ ನಸುಂಸಕ, ಗಂಡಸೇ ಅಲ್ಲ ಅಂತೆಲ್ಲಾ ಆರೋಪ ಮಾಡಿದ್ದು, ಈ ಎಲ್ಲಾ ಬೆಳವಣಿಗಳಿಂದ ಮನನೊಂದು ಸೂರಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟಕ್ಕೂ ಗಾನವಿ ಹನಿಮೂನ್ ಟ್ರಿಪ್ನಿಂದ ಅರ್ಧಕ್ಕೆ ಬಂದು ಸಾವಿಗೆ ಶರಣಾಗಿದ್ಯಾಕೆ? ಶ್ರೀಲಂಕಾದಲ್ಲಿ ಇಬ್ಬರು ನಡುವೆ ನಡೆದಿದ್ದೇನು ಎನ್ನುವುದು ಬೆಳಕಿಗೆ ಬಂದಿದೆ.
Updated on:Dec 29, 2025 | 4:24 PM

ಅದ್ಧೂರಿ ಮದುವೆ ಬಳಿಕ ಸೂರಜ್ ಮತ್ತು ಗಾನವಿ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು. 10 ದಿನದ ಹನಿಮೂನ್ ಪ್ಲಾನ್ ಮಾಡಿಕೊಂಡಿದ್ದ ಜೋಡಿ ಐದನೇ ದಿನಕ್ಕೆ ವಾಪಸ್ ಆಗಿದ್ದರು. ಹನಿಮೂನ್‌ನಿಂದ ಬರುತ್ತಿದ್ದಂತೆಯೇ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಎರಡು ದಿನದ ನಂತರ ಸೂರಜ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಹನಿಮೂನ್ ಅರ್ಧದಲ್ಲಿಯೇ ಪ್ರವಾಸ ಮೊಟಕುಗೊಳಿಸಿ ಬಂದಿದ್ದು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಗಾನವಿ ಮತ್ತು ಸೂರಜ್ ಹನಿಮೂನ್ ಅಂತ ಶ್ರೀಲಂಕಾಗೆ ತೆರಳಿದ್ದರು.ಏಕಾಂತದಲ್ಲಿ ಇದ್ದಾಗ ಹರ್ಷನ ಜೊತೆಗಿನ ಪ್ರೇಮಕಥೆಯನ್ನ ಹೇಳಿದ್ದಳು ಗಾನವಿ.ನನಗೆ ನೀನು ಇಷ್ಟ ಇಲ್ಲ,ಹರ್ಷ ನನ್ನ ಮದುವೆಯಾಗಲು ನನಗೆ ಇಷ್ಟ ಇತ್ತು.ಮನೆಯವರ ಒತ್ತಾಯಕ್ಕೆ ನಿನ್ನನ್ನು ಮದುವೆಯಾದೆ ಎಂದು ಗಾನವಿ ಹೇಳಿದ್ದಳು.ಇದ್ರಿಂದ ಶಾಕ್ ಆದ ಸೂರಜ್ ಹನಿಮೂನ್ ನಿಂದ ಅರ್ಧದಲ್ಲೆ ವಾಪಸ್ಸಾಗಿದ್ದ.ನಂತರ ಗಾನವಿ ತನ್ನ ತಾಯಿ ಮನೆಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಗಾನವಿ ಆತ್ಮಹತ್ಯೆ ನಂತರ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು.ಗಾನವಿ ಕುಟುಂಬದವರು ಸೂರಜ್ ಫ್ಯಾಮಿಲಿ ಮೇಲೆ ಆರೋಪ ಮಾಡಿ ದೊಡ್ಡ ಪ್ರತಿಭಟನೆ ಮಾಡಿದ್ದರು.ಅಲ್ಲದೇ ಸೂರಜ್ ಗಂಡಸೇ ಅಲ್ಲ, ಅವನು ನಪುಂಸಕ ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಸೂರಜ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು.

ಈ ಎಲ್ಲಾ ಬೆವಣಿಗೆಗಳಿಂದ ಮಾನಸಿಕವಾಗಿ ಹೆದರಿ ಸೂರಜ್ ಮಹರಾಷ್ಟ್ರದ ನಾಗ್ಪರದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದ.ತಾಯಿ ಜಯಂತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.ಗಾನವಿ ತನ್ನ ಲವ್ ಮ್ಯಾಟರ್ ಮುಚ್ಚಿಟ್ಟಿದ್ಲು ಅನ್ನೋದು ಈಗ ಗೊತ್ತಾಗಿದೆ.

ಗಾನವಿ ಮದುವೆಗೂ ಮುನ್ನ ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ. ಅವನನ್ನೇ ಮದುವೆಯಾಗಬೇಕೆಂದು ಗಾನವಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ. ಇದೀಗ ಈ ಹರ್ಷ ಯಾರು ಎಂಬುವುದು ತಿಳಿದು ಬಂದಿಲ್ಲ. ರಾಮಮೂರ್ತಿ ನಗರದಲ್ಲಿ ಗಾನವಿ ಪೋಷಕರು, ವಿದ್ಯಾರಣ್ಯಪುರದಲ್ಲಿ ಸೂರಜ್ ಕುಟುಂಬ ದೂರು ದಾಖಲಿಸಿದೆ.

ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್ ಭಾವ ರಾಜ್ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.

ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು ಸೂರಜ್ ಅನ್ನೋದು ತಿಳಿದವರ ಮಾತು.ತೋಟದಲ್ಲಿ ಕೆಲಸ ಮಾಡೋರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತೆ. ಯಾವುದೇ ಕೆಟ್ಟ ಅಭ್ಯಾಸ ಕೂಡ ಇರ್ಲಿಲ್ವಂತೆ. ನಮಗೆ ಇನ್ಯಾರು ಗತಿ ಅಂತ ತೋಟದ ಕೆಲಸಗಾರ ವೆಂಕಟಪ್ಪ ಕಣ್ಣೀತಾಕಿದ್ದಾರೆ.
Published On - 4:24 pm, Mon, 29 December 25




