ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಬಿರುಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗೆ; ವಾಹನಗಳು ಜಖಂ

Updated on: Apr 29, 2026 | 9:52 PM

ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಸಾವು ನೋವು ಸಂಭವಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿ ವಾಹನಗಳಿಗೆ ಹಾನಿಯಾಗಿದೆ. ನಗರದ ಕೆಲವೆಡೆ ವಿದ್ಯುತ್ ಕಡಿತದಿಂದ ಜನ ಪರದಾಡುವಂತಾಗಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಇಲ್ಲಿವೆ ನೋಡಿ ಫೋಟೋಸ್​​​.

1 / 8
ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿಂದು ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ಅಬ್ಬರಿಸಿದ ಮಳೆಗೆ  ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 50ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ.

ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿಂದು ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ಅಬ್ಬರಿಸಿದ ಮಳೆಗೆ ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 50ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ.

2 / 8

ವಿಜಯನಗರ, R​.T.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಕಬ್ಬನ್​ಪಾರ್ಕ್​, ಹೈಗ್ರೌಂಡ್ಸ್​​, ಉಪ್ಪಾರಪೇಟೆ, ಹಲಸೂರುಗೇಟ್​, ವಿಲ್ಸನ್​ಗಾರ್ಡನ್​, ಮೈಕೋಲೇಔಟ್, ಸದಾಶಿವನಗರದಲ್ಲಿ​ ಬೃಹತ್ ಮರಗಳು ಧರೆಗುರುಳಿವೆ.

3 / 8

ಗುಡುಗು, ಸಿಡಿಲು ಆಲಿಕಲ್ಲು ಮಳೆಗೆ ಬಸವನಗುಡಿಯಲ್ಲಿ ಮರಗಳೇ ಧರೆಗುರುಳಿವೆ. ಇದ್ರಿಂದ ಕಾರು, ಬಸ್, ಲಾರಿ ಹಾಗೂ ಬೈಕ್​ಗಳು ಜಖಂಗೊಂಡಿವೆ. ಲಾರಿ ಹೋಗ್ತಿದ್ದಾಗ ಮರ ಬಿದಿದ್ದು, ಬಸ್ ಹಾಗೂ ಬೈಕ್​ಗಳಿಗೂ ಹಾನಿಯಾಗಿವೆ.

4 / 8

ಮಳೆ ಅಬ್ಬರಿಂದಾಗಿ ಮರಗಳು ಬಿದ್ದಿದ್ದು, ಹಲವು ಏರಿಯಾಗಳಲ್ಲಿ ವಿದ್ಯುತ್ ಕೇಬಲ್ ಕಟ್ ಆಗಿವೆ. ಹೀಗಾಗಿ ನಿವಾಸಿಗಳು ಕತ್ತಲಲ್ಲೇ ಕುಳಿತಿದ್ದಾರೆ. ಹಲವೆಡೆ ಕರೆಂಟ್ ಇಲ್ಲದೆ ಜನ ಪರದಾಡಿದ್ದಾರೆ.

5 / 8

ಮಳೆಯಿಂದಾಗಿ ಸಿಟಿ ಸಿವಿಲ್ ಕೋರ್ಟ್ ಕ್ಯಾಂಟೀನ್ ಜಲಾವೃತಗೊಂಡಿತ್ತು. ಕ್ಯಾಂಟೀನ್​ನಲ್ಲೇ ಲಾಕ್ ಆಗಿ ವಕೀಲರು ಪರದಾಡಿದರು.

6 / 8

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದ್ದು, ದ್ವಿಚಕ್ರ ವಾಹನ, ಆಟೋಗಳು ಜಲಾವೃತಗೊಂಡಿವೆ. ಸವಾರರು ಪರದಾಡಿದರು.

7 / 8

ಇತ್ತ ಎಂ.ಜಿ.ರಸ್ತೆಯಲ್ಲಿ ಗ್ರಂಥಾಲಯಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಂಥಾಲಯದಲ್ಲಿ 5 ಸಾವಿರ ಪುಸ್ತಕಗಳು ನೀರುಪಾಲಾಗಿವೆ.

8 / 8

ಇನ್ನು ಭಾರೀ ಮಳೆಯಿಂದಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗೂ ಹೆಚ್ಚು ಕಾಲ ಸವಾರರು ಪರದಾಡಿದರು.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us