
ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದಾನೆ. ನಗರದಲ್ಲಿ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಮಳೆ ಸುರಿದೆ. ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡು ಕರೆಯಂತಾಗಿವೆ. ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದು, ಸಂಚಾರ ನಿಧಾನಗತಿಯಲ್ಲಿದೆ; ಎಚ್ಚರಿಕೆಯಿಂದ ಚಲಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. (PC: blrcitytraffic)
ಜೋರು ಗಾಳಿ ಮಳೆಗೆ ವಿಜ್ಞಾನ ನಗರ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ಧ ಪರಿಣಾಮ ಕಗ್ಗದಾಸಪುರ ಕಡೆಗೆ ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿದೆ. (PC: blrcitytraffic)
ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್: ಯೋಗೀಶ್ವರನಗರ ಬಳಿ ಮಳೆ ನೀರು ಶೇಖರಣೆಯಾಗಿದ್ದು, ಹೆಬ್ಬಾಳ ರಿಂಗ್ ರಸ್ತೆ ಕಡೆಗೆ ವಾಹನಗಳು ಸಾಲುಗಟ್ಟಿ ನಿಧಾನವಾಗಿ ಸಾಗುತ್ತಿವೆ. (PC: blrcitytraffic)
ಅಂಡರ್‌ಪಾಸ್, ಫ್ಲೈಓವರ್‌ಗಳಲ್ಲಿ ಜಲಾವೃತ: ಯಲಹಂಕದ ವಿದ್ಯಾಶಿಲ್ಪ ರೈಲ್ವೆ ಕೆಳಸೇತುವೆ, ರಾಷ್ಟ್ರೋತ್ಥಾನ ಮೇಲ್ಸೇತುವೆ, ಚೌಡಪ್ಪ ಲೇಔಟ್ ಹಾಗೂ ಥಣಿಸಂದ್ರ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರ ಅಸ್ತವ್ಯಸ್ತಗೊಂಡಿದೆ. (PC: blrcitytraffic)
ವಿದ್ಯಾಸೌಧ ಶಾಲೆ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ರೇನ್‌ಬೋ ಆಸ್ಪತ್ರೆಯಿಂದ ಕಾರ್ತಿಕ್ ನಗರ, ಯಲಹಂಕ ಬಿಎಸ್‌ಎಫ್‌ನಿಂದ ವಿಮಾನ ನಿಲ್ದಾಣ ರಸ್ತೆ ಹಾಗೂ ಮಹದೇವಪುರದಿಂದ ಲೋರಿ ಜಂಕ್ಷನ್‌ವರೆಗೆ ರಸ್ತೆ ಮೇಲೆ ನೀರು ನಿಂತು ಸವಾರರು ಪರದಾಡಿದರು. (PC: blrcitytraffic)
Published On - 7:39 pm, Wed, 30 September 26