ನೋಡ ಬನ್ನಿ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಹೂಗಳಲ್ಲಿ ಅರಳಿದ ಮಹರ್ಷಿ ವಾಲ್ಮೀಕಿ ಮತ್ತು ರಾಮಯಾಣ
ಲಾಲ್ಬಾಗ್ನಲ್ಲಿ 217ನೇ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿಯ ವಿಶೇಷವೆಂದರೆ ಆದಿಕವಿ ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣವನ್ನು ಹೂವುಗಳ ಮೂಲಕ ಚಿತ್ರಿಸಲಾಗಿದೆ. ಮುಖ್ಯಮಂತ್ರಿಗಳು ಉದ್ಘಾಟಿಸಿದ ಈ ಪ್ರದರ್ಶನದಲ್ಲಿ 3 ಲಕ್ಷಕ್ಕೂ ಹೆಚ್ಚು ಹೂವುಗಳಿವೆ. ರಾಮಾಯಣದ ವಿವಿಧ ಸನ್ನಿವೇಶಗಳನ್ನು ಹೂವುಗಳಿಂದ ಸೃಷ್ಟಿಸಲಾಗಿದೆ. ಜನವರಿ 27ರವರೆಗೆ ಈ ಪ್ರದರ್ಶನ ನಡೆಯಲಿದೆ.
1 / 5
ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ರಾಮಾಯಣದ ಕೆಲ ಸನ್ನಿವೇಶಗಳಲ್ಲಿ ಹೂವುಗಳಲ್ಲಿ ಅರಳಿದೆ.
2 / 5
217ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು. ಹೂವಿನ ಲೋಕ ಕಣ್ತುಂಬಿಕೊಂಡ ಮುಖ್ಯಮಂತ್ರಿಗಳಿಗೆ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಸಚಿವ ರಾಮಲಿಂಗರೆಡ್ಡಿ, ಸಚಿವ ಜಮೀರ್ ಅಹಮ್ಮದ್ ಖಾನ್ ಸಾಥ್ ನೀಡಿದರು. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಪ್ರಸನ್ನಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಇದ್ದರು.
3 / 5
ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು.
4 / 5
ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು.
5 / 5
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತ ನಿರ್ಮಿಸಲಾಗಿದೆ. ಬೃಹತ್ ಹುತ್ತದ ಮುಂದೆ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ, ರಾಮಾಯಣದ ಪಂಚವಟಿ, ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶ, ಹನುಮ-ಜಾಂಬವಂತ-ಜಟಾಯು ಅಳಿಲು ಕಲಾಕೃತಿಗಳು ಅನಾವರಣಗೊಂಡಿದೆ. ಜನವರಿ 16 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನ ಜನವರಿ 27ರ ವರೆಗೆ ಇರಲಿದೆ.
Published On - 9:32 am, Fri, 17 January 25