
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆಗುತ್ತಿದೆ. ಇಂದು ನಗರದ ಹಲವೆಡೆ ಜೋರು ಮಳೆ ಆಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಹವಾಮಾನ ಇಲಾಖೆ ಇಂದು ಮತ್ತು ನಾಳೆ ಬೆಂಗಳೂರಿಗೆ ಯಲ್ಲೋ ಅಲರ್ಟ್ ನೀಡಿದೆ.

ನಗದರಲ್ಲಿ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣವಿತ್ತು. ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಹಲವೆಡೆ ಮಳೆ ಸುರಿದಿದೆ. ಜಿಟಿ ಜಿಟಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಆನೇಕಲ್, ಜಿಗಣಿ, ಬನ್ನೇರುಘಟ್ಟ ಚಂದಾಪುರ ಹಲವೆಡೆ ಮಳೆ ಆಗಿದ್ದು, ರಸ್ತೆಯಲ್ಲಿಯೇ ಮಳೆ ನೀರು ನಿಂತಿದೆ. ಹೀಗಾಗಿ ಪಾದಚಾರಿಗಳು ಪರದಾಡುವಂತಾಗಿದೆ.

ಇನ್ನು ಸಂಜೆ ಆಗುತ್ತಿದ್ದಂತೆ ದಿಢೀರ್ ಎಂಟ್ರಿ ಕೊಟ್ಟ ವರುಣ ವಿಜಯನಗರ, ಮಾಗಡಿ ರಸ್ತೆ, ಮೆಜೆಸ್ಟಿಕ್, ಮೈಸೂರು ರಸ್ತೆ ಮತ್ತು ಆರ್‌ಆರ್ ನಗರದಲ್ಲಿ ಕೂಡ ಜೋರು ಮಳೆ ಸುರಿದಿದೆ.

ಜೋರು ಮಳೆಗೆ ವೀರಸಂದ್ರ, ಇಲೆಕ್ಟ್ರಾನಿಕ್ ಸಿಟಿ ರಸ್ತೆ ಸಂಪೂರ್ಣ ಜಲಾವೃವಾಗಿದೆ.

ನಗರದ ಸರ್ಜಾಪುರ ರಸ್ತೆಯ ವಿಪ್ರೋ ಸಿಗ್ನಲ್ ಬಳಿ ಕೂಡ ಭಾರೀ ಮಳೆಯಾಗಿದೆ.