- TV9 Kannada Photo gallery Bigg Boss Candidate Hanumantha Lamani Plus And Minus And his winning Chances cinema News in Kannada
ಮಾತು ಕಡಿಮೆ, ಕೆಲಸ ಜಾಸ್ತಿ; ಸ್ವಿಚ್ ಆಫ್ ಆಗೋದು ಕಡಿಮೆ ಆದ್ರೆ ಕಪ್ ಇವರದ್ದೇ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದವರು ಹನುಮಂತ. ಅವರು ಬಿಗ್ ಬಾಸ್ ಆರಂಭ ಆದ ಕೆಲವೇ ವಾರಗಳಲ್ಲಿ ದೊಡ್ಮನೆಗೆ ಎಂಟ್ರಿ ಪಡೆದರು. ಅವರ ಪ್ಲಸ್ ಹಾಗೂ ಮೈನಸ್ ಬಗ್ಗೆ ಈ ಸ್ಟೋರಿಯಲ್ಲಿ ವಿವರ ಇದೆ.
Updated on:Jan 21, 2025 | 11:43 AM

ಬಿಗ್ ಬಾಸ್ನಲ್ಲಿ ಹಾಡಿನ ಮೂಲಕ, ಆಟದ ಮೂಲಕ ಎಲ್ಲರ ಗಮನ ಸೆಳೆದವರು ಹನುಮಂತ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಕಪ್ ಗೆಲ್ಲಬೇಕು ಎನ್ನುವ ಆಸೆ ಇದೆ. ಅವರು ಹಲವು ಪ್ಲಸ್ ಹಾಗೂ ಮೈನಸ್ಗಳನ್ನು ಹೊಂದಿದ್ದಾರೆ.

ಹನುಮಂತ ಅವರಲ್ಲಿ ಇಷ್ಟ ಆಗುವ ಗುಣ ಎಂದರೆ ಮಾತು ಕಡಿಮೆ, ಕೆಲಸ ಹೆಚ್ಚು. ಅವರ ಜೊತೆ ಯಾರಾದರೂ ವಾದಕ್ಕೆ ಇಳಿದರೂ ಅಷ್ಟಾಗಿ ಮಾತನಾಡುವುದಿಲ್ಲ. ಬದಲಿಗೆ ಸೈಲೆಂಟ್ ಆಗಿ ಇರುತ್ತಾರೆ. ಅವರದ್ದು ಕೆಲಸ ಹೆಚ್ಚು. ಟಾಸ್ಕ್ ಮೂಲಕ ತಮ್ಮ ತಾಕತ್ತನ್ನು ತೋರಿಸಿದ್ದಾರೆ.

ಬಿಗ್ ಬಾಸ್ನಲ್ಲಿ ಟಾಸ್ಕ್ಗಳನ್ನು ಹನುಮಂತ ಅವರು ಉತ್ತಮವಾಗಿ ಆಡಿದ್ದಾರೆ. ಇದು ಅವರಿಗೆ ಪ್ಲಸ್ ಕೂಡ ಹೌದು. ಇನ್ನು, ಮನರಂಜನೆ ನೀಡುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ಅವರ ಆಟ, ಬುದ್ಧಿವಂತಿಕೆ ಕಿಚ್ಚ ಸುದೀಪ್ ಅವರಿಗೂ ಇಷ್ಟ ಆಗಿದೆ.

Hanumantha (5)

ಸ್ವಿಚ್ ಆಫ್ ಆಗೋದು ಕಡಿಮೆ ಮಾಡಿದರೆ ಅವರಿಗೆ ಸಹಕಾರಿ ಆಗಲಿದೆ. ಅವರು ಮುಂಬರುವ ಅಷ್ಟೂ ದಿನ ಆ್ಯಕ್ಟೀವ್ ಆಗಿ ಇರಬೇಕಿದೆ. ಹಾಗಿದ್ದರೆ ಮಾತ್ರ ಹನುಮಂತ ಅವರಿಗೆ ಕಪ್ ಗೆಲ್ಲಲು ಸಾಧ್ಯವಾಗಲಿದೆ. ಕಪ್ ಗೆದ್ದರೆ ಅವರಿಗೆ 50 ಲಕ್ಷ ರೂಪಾಯಿ ಸಿಗಲಿದೆ.
Published On - 11:42 am, Tue, 21 January 25

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



