
ನಟಿ ಸಾನ್ಯಾ ಐಯ್ಯರ್ ಅವರು ಇತ್ತೀಚೆಗೆ ಹಲವು ರೀತಿಯ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಹೊಸಹೊಸ ಫೋಟೋ ಹಂಚಿಕೊಂಡು ಅವರು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಈಗ ಸಾನ್ಯಾ ಐಯ್ಯರ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಅವರನ್ನು ಚಾರ್ಮಿಂಗ್ ಬ್ಯೂಟಿ ಎಂದು ಫ್ಯಾನ್ಸ್ ಕರೆದಿದ್ದಾರೆ.

ಸಾನ್ಯಾ ಐಯ್ಯರ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್ ಸೀಸನ್ 9’ರ ಮೂಲಕ ಅವರ ಜನಪ್ರಿಯತೆ ಹೆಚ್ಚಿತು.

ಸಾನ್ಯಾ ಐಯ್ಯರ್ ಅವರು ಸಿನಿಮಾ ರಂಗಕ್ಕೆ ಬರಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಆದರೆ, ಸದ್ಯಕ್ಕಂತೂ ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.

ಬಾಲಿವುಡ್ ಫೋಟೋಗ್ರಾಫರ್ ಡಬೂ ರತ್ನಾನಿ ಜೊತೆ ಸಾನ್ಯಾ ಐಯ್ಯರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಫ್ಯಾನ್ಸ್ಗೆ ಇಷ್ಟ ಆಗಿದೆ.