
ಕಿಚ್ಚ ಸುದೀಪ್ ಅವರು ಈ ಬಾರಿಯ ಬಿಗ್ ಬಾಸ್ನ ಎಂದಿನ ಎನರ್ಜಿಯಲ್ಲಿ ನಡೆಸಿಕೊಟ್ಟಿದ್ದಾರೆ. ಅವರು ಎಲ್ಲಾ ಸ್ಪರ್ಧಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಅವರು ಹಲವು ಗಂಟೆ ನಿಂತೇ ಇದ್ದರು. ಅವರ ಎನರ್ಜಿಗೆ ಎಲ್ಲರೂ ಹ್ಯಾಟ್ಸಾಪ್ ಹೇಳಿದ್ದಾರೆ.

ಕಾಕ್ರೋಚ್ ಸುಧಿ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು. ಅವರು ದೊಡ್ಮನೆಯಲ್ಲಿ ಯಾವ ರೀತಿಯಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರ ಎಂಟ್ರಿ ಅದ್ದೂರಿಯಾಗಿ ಇತ್ತು.

ಸ್ಪಂದನಾ ಸೋಮಣ್ಣ: ಧಾರಾವಾಹಿಗಳಲ್ಲಿ ನಟಿಸಿದ ಸ್ಪಂದನಾ ಸೋಮಣ್ಣ ದೊಡ್ಮನೆಗೆ ಬಂದಿದ್ದಾರೆ. ಅವರು ಸಖತ್ ಗ್ಲಾಮರ್ ಕೂಡ ಹೌದು. ಅವರು ಬಿಗ್ ಬಾಸ್ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ರಾಶಿಕಾ ಶೆಟ್ಟಿ: ‘ಮನದ ಕಡಲು’ ಸಿನಿಮಾದಲ್ಲಿ ನಟಿಸಿದ್ದ ರಾಶಿಕಾ ಶೆಟ್ಟಿ ಅವರು ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. ‘ಹಲವು ಆಡಿಷನ್ ಕೊಟ್ಟರೂ ಸೆಲೆಕ್ಟ್ ಆಗಿಲ್ಲ. ಈಗ ಬಿಗ್ ಬಾಸ್ಗೆ ಬರ್ತಿದ್ದೇನೆ’ ಎಂದಿದ್ದಾರೆ ರಾಶಿಕಾ.

ರಕ್ಷಿತಾ ಶೆಟ್ಟಿ ಮಂಗಳೂರು ಮೂಲದವರು. ಅವರು ಮುಂಬೈನಲ್ಲಿ ವಾಸವಾಗಿದ್ದಾರೆ. ಅಡುಗೆ ಮಾಡುವಾಗ ಅವರು ಬಳಸುವ ವಿಚಿತ್ರ ಕನ್ನಡದ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಸಾಕಷ್ಟು ಟ್ರೋಲ್ ಆಗಿದ್ದೂ ಇದೆ. ಈ ರಕ್ಷಿತಾ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ.

ಮಂಜು ಭಾಷಿಣಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರು 90ರ ದಶಕದ ಕಿಡ್ಗಳಿಗೆ ಸಮಾಜ ಸೇವಕಿ ಲಲಿತಾಂಬ ಎಂದೇ ಪರಿಚಯವಾದವರು. ಅರ್ಥಾತ್ ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದರು. ಅವರು ಬಿಗ್ ಬಾಸ್ಗೆ ಬಂದಿದ್ದಾರೆ.

ಮಾಳು: ‘ನಾ ಡ್ರೈವರ’ ಹಾಡಿನ ಮೂಲಕ ಫೇಮಸ್ ಆದ ಉತ್ತರ ಕರ್ನಾಟಕದ ಪ್ರತಿಭೆ ಮಾಳು ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಗಾಯನದ ಮೂಲಕ ಅವರು ಗಮನ ಸೆಳೆಯುವ ಸಾಧ್ಯತೆ ಇದೆ.

ದೊಡ್ಮನೆಗೆ ಮಾತಿನ ಮಲ್ಲಿ ಮಲ್ಲಮ್ಮ ಬಂದಿದ್ದಾರೆ. ಅವರು ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದವರು. ಅವರ ಮಾತು ದೊಡ್ಮನೆಯಲ್ಲಿ ಯಾವ ರೀತಿಯಲ್ಲಿ ಕೆಲಸಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಾವ್ಯಾ ಶೈವ: ಕೆಂಡ ಸಂಪಿಗೆ ಧಾರಾವಾಹಿ ಮಾಡಿ ಫೇಮಸ್ ಆದ ಕಾವ್ಯಾ ಶೈವ ಅವರು ಇತ್ತೀಚೆಗೆ ‘ಕೊತ್ತಲವಾಡಿ’ ಸಿನಿಮಾ ಮಾಡಿದರು. ಈ ಚಿತ್ರ ಹೆಚ್ಚು ಗಮನ ಸೆಳೆಯಲೇ ಇಲ್ಲ. ಈಗ ಅವರು ನೇರವಾಗಿ ದೊಡ್ಮನೆಗೆ ಬಂದಿದ್ದಾರೆ.

ಕರಿ ಬಸಪ್ಪ: ಬಾಡಿ ಬಿಲ್ಡರ್ ಆಗಿ ಫೇಮಸ್ ಆದ ಕರಿ ಬಸಪ್ಪ ದೊಡ್ಮನೆಗೆ ಬಂದಿದ್ದಾರೆ. ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ.

ಜಾನ್ವಿ: ಆ್ಯಂಕರ್ ಆಗಿ ಫೇಮಸ್ ಆದ ಜಾನ್ವಿ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ವೈಯಕ್ತಿಕ ಜೀವನದ ಮೂಲಕವೂ ಸುದ್ದಿ ಆಗಿದ್ದು ಇದೆ. ಈಗ ಅವರು ಬಿಗ್ ಬಾಸ್ ಮೂಲಕ ಎಲ್ಲರ ಗಮನ ಸೆಳೆಯಲು ರೆಡಿ ಆಗಿದ್ದಾರೆ.

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದ ಅವರು ಈಗ ದೊಡ್ಮನೆಗೆ ಅತಿಥಿಯಾಗಿದ್ದಾರೆ. ನಟರಾಜ್ ಎಂಬುದು ಗಿಲ್ಲಿ ನಟನ ನಿಜವಾದ ಹೆಸರು.

ಧ್ರುವಂತ್: ವಿವಾದಗಳ ಮೂಲಕ ಸುದ್ದಿ ಆದವರು ಧ್ರುವಂತ್. ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಅವರ ಮೇಲೆ ಇತ್ತು. ಈ ಪ್ರಕರಣದಲ್ಲಿ ಅವರು ಅರೆಸ್ಟ್ ಕೂಡ ಆಗಿದ್ದರು. ಇವರು ಕೂಡ ‘ಮುದ್ದು ಲಕ್ಷ್ಮೀ’ ಧಾರಾವಾಹಿ ಕಲಾವಿದ.

ಧನುಷ್: ಗೀತಾ ಧಾರಾವಾಹಿಯಲ್ಲಿ ಧನುಷ್ ಅವರು ನಟಿಸಿದ್ದರು. ಅವರು ಬಿಗ್ ಬಾಸ್ ವೇದಿಕೆ ಮೇಲೆ ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ಭವ್ಯಾ ಗೌಡ ಅವರು ಬಂದಿದ್ದರು. ಈ ಬಾರಿ ಧನುಷ್ ಬಂದಿದ್ದಾರೆ.

ಚಂದ್ರಪ್ರಭ: ಹಾಸ್ಯ ಶೋಗಳ ಮೂಲಕ ಫೇಮಸ್ ಆದ ಚಂದ್ರಪ್ರಭ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅವರು ಇತ್ತೀಚೆಗೆ ಕೆಲಸ ಇಲ್ಲದೆ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅವರು ದೊಡ್ಮನೆಯಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಶ್ವಿನಿ: ‘ಮುದ್ದು ಲಕ್ಷ್ಮೀ’ ಧಾರಾವಾಹಿ ಮೂಲಕ ಫೇಮಸ್ ಆದ ಅಶ್ವಿನಿ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಶೋ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಅಶ್ವಿನಿ ಗೌಡ: ಅಶ್ವಿನಿ ಗೌಡ ಅವರು 25 ಧಾರಾವಾಹಿ, 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕನ್ನಡದ ಹೋರಾಟಗಾರ್ತಿ ಕೂಡ ಹೌದು. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಅಭಿಷೇಕ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಬಂದಿದ್ದಾರೆ. ಅವರು ವಧು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಈ ಧಾರಾವಾಹಿ ಆರಂಭ ಆಗಿತ್ತು. ಆ ಬಳಿಕ ಕೊನೆಗೊಂಡಿತು. ಅವರು ಯಾವ ರೀತಿಯಲ್ಲಿ ಪರ್ಫಾರ್ಮ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಡಾಗ್ ಸತೀಶ್: ಡಾಗ್ ಬ್ರೀಡರ್ ಸತೀಶ್ ಅವರು ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರು ಈ ಶೋಗೆ ಬರೋಕೆ ಬರೋಬ್ಬರಿ 25 ಲಕ್ಷ ರೂಪಾಯಿ ಬಟ್ಟೆ ಖರೀದಿಸಿದ್ದಾರಂತೆ.

ಮಿರ್ಚಿ ಆರ್ಜೆ ಅಮಿತ್ ಅವರು ಕೂಡ ದೊಡ್ಮನೆಯ ಸ್ಪರ್ಧಿ ಆಗಿದ್ದಾರೆ. ಅವರು ಈ ಸೀಸನ್ನ ಕೊನೆಯ ಸ್ಪರ್ಧಿ ಆಗಿದ್ದಾರೆ. ಅವರು ಮಾತಿನ ಮೂಲಕ ಗಮನ ಸೆಳೆದವರು.
Published On - 11:15 pm, Sun, 28 September 25