- Kannada News Photo gallery Bigg Boss Kannada season 10 here is the photos and details of all the contestants
Bigg Boss 10: ಬಿಗ್ಬಾಸ್ 10ರ ಎಲ್ಲ ಸ್ಪರ್ಧಿಗಳ ಫೋಟಸ್ ಇಲ್ಲಿದೆ..
Bigg Boss 10: ಬಿಗ್ಬಾಸ್ ಕನ್ನಡ ಸೀಸನ್ 10 ಆರಂಭವಾಗಿದ್ದು, ಈ ಸೀಸನ್ನಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಂಡಿರುವ ಎಲ್ಲ ಸ್ಪರ್ಧಿಗಳ ಚಿತ್ರ, ಮಾಹಿತಿ ಇಲ್ಲಿದೆ.
Updated on:Oct 09, 2023 | 8:46 AM

'ಲಕ್ಷ್ಮಣ' ಧಾರಾವಾಹಿ ನಟಿ ಭಾಗ್ಯಶ್ರೀ ಸಹ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆ ಸೇರಿದ್ದಾರೆ, ಆದರೆ ಅವರಿನ್ನೂ ವೇಯಿಟಿಂಗ್ ಲಿಸ್ಟ್ನಲ್ಲಿದ್ದಾರೆ. ಮುಂದಿನ ಶನಿವಾರ ಅವರ ಭವಿಷ್ಯ ತಿಳಿಯಲಿದೆ.

ಕನ್ನಡದ ಹುಡುಗಿಯೇ ಆದರೂ ಲಾಸ್ ಏಂಜಲ್ಸ್, ದುಬೈಗಳಲ್ಲಿ ಬೆಳೆದಿರುವ ರ್ಯಾಪರ್ ಇಶಾನಿ ಬಿಗ್ಬಾಸ್ ಮನೆ ಸೇರಿದ್ದಾರೆ.

ಕನ್ನಡದ ಜನಪ್ರಿಯ ಪತ್ರಕರ್ತರಲ್ಲಿ ಒಬ್ಬರಾದ ಗೌರೀಶ್ ಅಕ್ಕಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ.

'ಡೊಳ್ಳು' ಸಿನಿಮಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಾರ್ತಿಕ್ ಮಹೇಶ್ ಸಹ ಬಿಗ್ಬಾಸ್ ಮನೆಯಲ್ಲಿದ್ದಾರೆ.

ನೈಜೀರಿಯಾ ಕನ್ನಡಿದ ಮೈಖೆಲ್ ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ.

ಮೊದಲ ಸ್ಪರ್ಧಿ ನಟಿ, ಮಾಡೆಲ್, ಬೋಲ್ಡ್ ಹುಡುಗಿ ನಮ್ರತಾ

ಸವಾಲುಗಳನ್ನು ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ವನಜಾಕ್ಷಿ ಸಹ ಬಿಗ್ಬಾಸ್ ಮನೆಯಲ್ಲಿದ್ದಾರೆ.

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸಹ ಬಿಗ್ಬಾಸ್ ಮನೆಯಲ್ಲಿದ್ದಾರೆ. ಇವರೂ ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.

'ರಂಗೋಲಿ' ನಟಿ ಸಿರಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಸಿರಿ ಬಹಳ ಹಿರಿಯ ಧಾರಾವಾಹಿ ನಟಿ.

777 ಚಾರ್ಲಿ ಸಿನಿಮಾದ ನಟಿ ಸಂಗೀತ ಶೃಂಗೇರಿ ಅವರು ಸಹ ಬಿಗ್ಬಾಸ್ ಮನೆ ಸೇರಿದ್ದಾರೆ. ಇವರೂ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹಳ್ಳಿಕಾರ್ ಸಂತೋಶ್ ಎಂದೇ ಜನಪ್ರಿಯವಾಗಿರುವ ರೈತ, ಜಮೀನ್ದಾರ ಸಂತೋಶ್ ಸಹ ಬಿಗ್ಬಾಸ್ ಮನೆ ಸೇರಿದ್ದಾರೆ.

ಜನಪ್ರಿಯ ಉರಗ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಬಿಗ್ಬಾಸ್ ಮನೆಗೆ ಬಂದಿದ್ದು, ಮನೆಯ ಹಿರಿಯ ಸದಸ್ಯರು ಅವರೇ.

ಎರಡನೇ ಸ್ಪರ್ಧಿ ನಟ ಸ್ನೇಹಿತ್ ಗೌಡ. ನಮ್ಮನೆ ಯುವರಾಣಿ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಸ್ನೇಹಿತ್.

ನಟಿ ತನಿಷಾ ಕುಪ್ಪಂಡ ಸಹ ಬಿಗ್ಬಾಸ್ ಮನೆ ಸೇರಿದ್ದಾರೆ. ಇವರಿಗೂ ಸಹ ಒಂದು ವಾರ ಕಾಲಾವಕಾಶವಿದೆ.

ಹಾಸ್ಯ ಕಲಾವಿದ ಸಂತೋಶ್ ಅಲಿಯಾಸ್ ತುಕಾಲಿ ಸಂತೋಶ್ ಸಹ ಈ ಬಾರಿ ಬಿಗ್ಬಾಸ್ ನಲ್ಲಿದ್ದಾರೆ.

'ಹರ ಹರ ಮಹದೇವ' ಧಾರಾವಾಹಿಯ ಶಿವನ ಪಾತ್ರದಲ್ಲಿ ಮಿಂಚಿರುವ ವಿನಯ್ ಸಹ ಈ ಬಾರಿ ಬಿಗ್ಬಾಸ್ ಸ್ಪರ್ಧಿ.
Published On - 8:00 am, Mon, 9 October 23




