BBK11: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ 17 ಸ್ಪರ್ಧಿಗಳ ಹೆಸರು, ವಿವರ, ಫೋಟೋ
Bigg Boss Kannada season 11 Contestant list: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಮೂಡಿ ಬಂದಿದೆ. ಸ್ಪರ್ಧಿಗಳ ಫೋಟೋ, ವಿವರ ಇಲ್ಲಿದೆ.
1 / 17
‘ಭವ್ಯಾ ಗೌಡ’ ಅವರು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ಅವರು ದೊಡ್ಮನೆಯಲ್ಲಿ ಸ್ವರ್ಗದ ಬಾಗಿಲು ತೆಗೆದಿದ್ದಾರೆ. ಅವರು ಈ ಮೊದಲು ‘ಗೀತಾ’ ಧಾರಾವಾಹಿಯಲ್ಲಿ ನಟಿಸಿದ್ದರು.
2 / 17
ಯಮುನಾ ಶ್ರೀನಿಧಿ ಅವರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ. ಅವರು ಕೂಡ ಸ್ವರ್ಗದ ಬಾಗಿಲು ತೆಗೆದಿದ್ದಾರೆ.
3 / 17
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೋಶಿಯಲ್ ಮೀಡಿಯಾ ಖೋಟಾ ಮೂಲಕ ಎಂಟ್ರಿ ಕೊಟ್ಟವರು ಧನರಾಜ್ ಆಚಾರ್. ಮಗು ಜನಿಸಿದ ಒಂದೇ ತಿಂಗಳಿಗೆ ಅವರು ದೊಡ್ಮನೆಗೆ ಬಂದಿದ್ದಾರೆ. ಅವರಿಗೆ ಸ್ವರ್ಗ ಸಿಕ್ಕಿದೆ.
4 / 17
‘ಸತ್ಯ’ ಧಾರಾವಾಹಿ ಮೂಲಕ ಫೇಮಸ್ ಆದ ಗೌತಮಿ ಜಾಧವ್ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಸಿನಿಮಾ ಮಾಡಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಅವರ ಆಡು ಭಾಷೆ ಮರಾಠಿ. ನಂತರ ಅವರು ಕನ್ನಡ ಕಲಿತರು. ಬಿಗ್ ಬಾಸ್ನಲ್ಲಿ ಸ್ವರ್ಗದಲ್ಲಿ ಇದ್ದಾರೆ.
5 / 17
ಈ ಬಾರಿ ದೊಡ್ಮನೆಗೆ ಅನುಷಾ ರೈ ಕೂಡ ಬಂದಿದ್ದಾರೆ. ‘ಧೈರ್ಯಂ ಸರ್ವತ್ರ ಸಾಧನಂ’, ‘ಬಿಎಂಡಬ್ಲ್ಯೂ’, ‘ಖಡಕ್’, ‘ರೈಡರ್’, ‘ದಮಯಂತಿ’ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ. ಅವರಿಗೆ ನರಕ ಸಿಕ್ಕಿದೆ.
6 / 17
ಹಿರಿಯ ನಟ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್ ದೊಡ್ಮನೆಗೆ ಬಂದಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ‘ನವಗ್ರಹ’ ಸಿನಿಮಾದಲ್ಲಿ ನಟಿಸಿದ್ದರು. ಅವರಿಗೆ ಸ್ವರ್ಗ ಸಿಕ್ಕಿದೆ.
7 / 17
ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇದ್ದಿದ್ದು ಜಗದೀಶ್. ಅವರು ವೃತ್ತಿಯಲ್ಲಿ ವಕೀಲರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಬಂದಿದ್ದು, ರ‍್ಯಾಶ್ ಆಗಿ ಅವರು ದೊಡ್ಮನೆಯಲ್ಲಿ ನಡೆದುಕೊಳ್ಳುವ ಸಾಧ್ಯತೆ ಇದೆ. ಅವರಿಗೆ ಸ್ವರ್ಗ ಸಿಕ್ಕಿದೆ.
8 / 17
ಶಿಶಿರ್ ಅವರು ಕಿರುತೆರೆ ಹಾಗೂ ಹಿರಿತೆರೆ ನಟ. ಅವರಿಗೆ 33 ವರ್ಷ. ಅವರು ಅಡುಗೆ ಮಾಡುತ್ತಾರೆ. ಅವರು ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಖ್ಯಾತಿ ಹೆಚ್ಚಾಗೋ ನಿರೀಕ್ಷೆ ಇದೆ. ಶಿಶಿರ್ಗೆ ನರಕ ಸಿಕ್ಕಿದೆ.
9 / 17
ತ್ರಿವಿಕ್ರಂ ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ. ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ‘ಆರ್ಟಿಸ್ಟ್ ಆಗಿ ಆರು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಸಾಧನೆ ಮಾಡಬೇಕು ಎಂದರೆ ವೇದಿಕೆ ಏರಬೇಕು. ಅಂಥಹ ವೇದಿಕೆ ಇದು’ ಎಂದಿದ್ದಾರೆ ಅವರು. ತ್ರಿವಿಕ್ರಂ ಸ್ವರ್ಗದ ಬಾಗಿಲು ತಟ್ಟಿದ್ದಾರೆ.
10 / 17
ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳ ಮೂಲಕ ಫೇಮಸ್ ಆದವರು ಹಂಸ. ಈಗ ಅವರಿಗೆ ದೊಡ್ಮನೆಯಲ್ಲಿ ಅವಕಾಶ ಸಿಕ್ಕಿದೆ. ಅವರು ಸ್ವರ್ಗದ ಬಾಗಿಲನ್ನು ತಟ್ಟಿದ್ದಾರೆ.
11 / 17
‘ಬಿಗ್ ಬಾಸ್ ಕನ್ನಡ ಸೀಸನ್ 11’ಗೆ ಮಾನಸಾ ಬಂದಿದ್ದಾರೆ. ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್ ಅವರ ಪತ್ನಿ. ಮಾನಸಾ ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಕಾಣಿಸಿಕೊಂಡಿದ್ದರು. ತುಕಾಲಿ ಸಂತೋಷ್ ಕೂಡ ಈ ಶೋನಲ್ಲಿ ಇದ್ದರು. ಅವರಿಗೆ ನರಕ ಸಿಕ್ಕಿದೆ.
12 / 17
ಗೋಲ್ಡ್ ಸುರೇಶ್ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೈತುಂಬಾ ಅವರು ಚಿನ್ನ ಹೇರಿಕೊಂಡು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ವಿಶೇಷ. ಅವರು ನರಕ ಸೇರಿದ್ದಾರೆ.
13 / 17
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಸಿಂಧೋಗಿ ಅವರ ಆಗಮನ ಆಗಿದೆ. ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅವರು ಅಪ್ಪ-ಅಮ್ಮ ಕಳೆದುಕೊಂಡಿದ್ದಾರೆ. ಅವರು ಒಂಟಿಯಾಗಿ ಬದುಕಿದ್ದಾರೆ. ಐಶ್ವರ್ಯಾ ಸ್ವರ್ಗದಲ್ಲಿದ್ದಾರೆ.
14 / 17
ಅರೆಸ್ಟ್ ಆಗಿ ಜೈಲು ಸೇರಿದ್ದು ಚೈತ್ರಾ ಕುಂದಾಪುರ. ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಹಿಂದೂ ಚಿಂತನೆಗಳ ಮೂಲಕ ಗುರುತಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರಿಗೆ ನರಕ ಸಿಕ್ಕಿದೆ.
15 / 17
ಉಗ್ರಂ ಮಂಜು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಉಗ್ರಂ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರಿಗೆ ಸ್ವರ್ಗ ಸಿಕ್ಕಿದೆ.
16 / 17
ಮೋಕ್ಷಿತಾ ಪೈ ಅವರು ‘ಪಾರು’ ಎಂದೇ ಫೇಮಸ್ ಆದವರು. ಅವರು ಜೀ ಕನ್ನಡದ ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರಿಗೆ ನರಕ ಸಿಕ್ಕಿದೆ.
17 / 17
ರಂಜಿತ್ ಕುಮಾರ್ ಅವರು ನಟನಾಗಿ, ಕ್ರಿಕೆಟರ್ ಆಗಿ ಹೆಸರು ಮಾಡಿದ್ದಾರೆ. ಸಿಸಿಎಲ್ನಲ್ಲಿ ಸುದೀಪ್ ತಂಡದಲ್ಲೇ ಅವರು ಆಡಿದ್ದಾರೆ. ಅವರು ‘ಶನಿ’ ಧಾರಾವಾಹಿ ಮಾಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನರಕ ಸಿಕ್ಕಿದೆ.