
‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್ನ ಕೊಟ್ಟರು.

ಹನುಮಂತ ಅವರಿಗೆ ಸುದೀಪ್ ಅವರು ಕಪ್ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.