
ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ದೋಸ್ತಿ ಭರ್ಜರಿ ಶಕ್ತಿ ಪ್ರದರ್ಶಿಸಿದೆ. ಮುಡಾ ಯಾತ್ರೆ ಸಮಾರೋಪ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ಬೇಕು ಅಂತಾ ದೋಸ್ತಿ ನಾಯಕರು ಆಗ್ರಹಿಸಿದ್ದಾರೆ. ಮಾಜಿ ಸಿಎಂಗಳು, ಹೆಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಸೇರಿ ಘಟಾನುಘಟಿ ನಾಯಕರು ಹಾಗೂ ಎರಡೂ ಪಕ್ಷದ ಸಾವಿರಾರು ಸಂಖ್ಯೆ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.

ಬಿಜೆಪಿ-ಜೆಡಿಎಸ್ ಎಂಟು ದಿನಗಳ ಕಾಲ ಒಟ್ಟು 135 ಕಿ.ಮೀ. ಪಾದಯಾತ್ರೆ ಮಾಡಿದೆ. ಇಂದು ಮೈಸೂರಿನ ಮಹಾರಾಜ ಮೈದಾನದಲ್ಲಿ ಸಮಾರೋಪ ಸಮಾರಂಭ ಮಾಡುವ ಮೂಲಕ ಪಾದಯಾತ್ರೆ ಅಂತ್ಯವಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ ಮುಖ್ಯಮಂತ್ರಿ ಮತ್ತು ಡಿಸಿಎಂ ವಿರುದ್ಧ ಗುಡುಗಿದ್ದಾರೆ. ಸಿದ್ದರಾಮಯ್ಯ ನಿಮ್ಮನ್ನು ಮನೆಗೆ ಕಳುಹಿಸುತ್ತೇನೆ ಎಂದ ಅವರು, ಶಿವಕುಮಾರ್ ಮುಂದಿನ ಭವಿಷ್ಯ ನೋಡ್ಕೊಳ್ಳಿ ಅಂತ ಅಬ್ಬರಿಸಿದ್ದಾರೆ.

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಮುಖ್ಯವಾಗಿ ಟಾರ್ಗೆಟ್ ಮಾಡಿ ಮಾತ್ನಾಡಿದಾರೆ. ನಿನ್ನೆ ಡಿಕೆ ಶಿವಕುಮಾರ್ ನೀಡಿದ್ದ ಒಂದೊಂದು ಮಾತಿಗೂ ತಿರುಗೇಟು ಕೊಟ್ಟಿದ್ದಾರೆ.

5,000 ನಿವೇಶನಗಳನ್ನ ನುಂಗಿದ ಆ 14 ನಿವೇಶನ ಅಂತಾ ಮುಡಾ ಹಗರಣದ ಪುಸ್ತಕವನ್ನು ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ.

ಬಿಜೆಪಿ, ಜೆಡಿಎಸ್ ದೋಸ್ತಿ ಪಾದಯಾತ್ರೆಗೆ ಎರಡೂ ಪಕ್ಷದ ಸಾವಿರಾರು ಸಂಖ್ಯೆ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.