- Kannada News Photo gallery Boiled Lemon Water: Boiled lemon water is worth it for many health benefits
Boiled Lemon Water: ಹಲವು ಆರೋಗ್ಯ ಪ್ರಯೋಜನಗಳಿಗೆ ಕುದಿಸಿದ ನಿಂಬೆ ನೀರು ಯೋಗ್ಯ
ಪ್ರತಿದಿನ ಬೆಳಿಗ್ಗೆ ಬೇಯಿಸಿದ ನಿಂಬೆ ರಸವನ್ನು ಕುಡಿಯುತ್ತಿದ್ದರೆ, ದೇಹಕ್ಕೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.
Updated on: Jun 02, 2023 | 10:01 PM

ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅದರಂತೆ ಯೋಗ, ವ್ಯಾಯಾಮ ಮಾಡುತ್ತಾರೆ. ಮತ್ತೆ ಕೆಲವರು ಬಿಸಿ ನೀರು ಸೇವನೆ ಮಾಡುತ್ತಾರೆ. ಇನ್ನು ಕೆಲವರಂತೂ ನೀರಿಗೆ ನಿಂಬೆ ರಸ ಕುಡಿಯುತ್ತಾರೆ. ಇದೆಲ್ಲವೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅದೇ ರೀತಿಯಾಗಿ ನಿಂಬೆಯನ್ನು ಕುದಿಸಿ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು.

ಪ್ರತಿದಿನ ಬೆಳಿಗ್ಗೆ ಬೇಯಿಸಿದ ನಿಂಬೆ ರಸವನ್ನು ಕುಡಿಯುತ್ತಿದ್ದರೆ, ದೇಹಕ್ಕೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ. ಮೊದಲು ನೀರನ್ನು ಕುದಿಸಿ, ಅದಕ್ಕೆ ಅರ್ಧ ನಿಂಬೆ ಹಿಂಡಿ. ಸ್ವಲ್ಪ ಹೊತ್ತು ಕುದಿಸಿ ತಣ್ಣಗಾದ ನಂತರ ಕುಡಿಯಿರಿ. ಈ ನಿಂಬೆ ನೀರಿನಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.

ಕುದಿಸಿದ ನಿಂಬೆ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದರಲ್ಲಿರುವ ವಿಟಮಿನ್ ಸಿ ಇರುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಿದೆ.

ಕುದಿಸಿದ ನಿಂಬೆ ನೀರನ್ನು ಕುಡಿಯುವುದರಿಂದ ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ದೇಹದಲ್ಲಿರುವ ಕೊಬ್ಬನ್ನು ಬೇಗನೆ ಕರಗಿಸುತ್ತದೆ. ದೇಹವು ನಿರ್ಜಲೀಕರಣವನ್ನು ತಕ್ಷಣವೇ ಹೊರಹಾಕುತ್ತದೆ. ಬಿಪಿ ನಿಯಂತ್ರಣದಲ್ಲಿರುತ್ತದೆ.



















