ಹಾಲು ಕುಡಿಯೋ ಮಗು ಇದ್ಯಾ? ಹಾಗಿದ್ರೆ ಎದೆ ಹಾಲು ಉಣಿಸುವ ತಾಯಂದಿರು ಈ ರೀತಿಯ ಬ್ರಾ ಧರಿಸಿ

Updated on: May 02, 2025 | 5:51 PM

ಇತರೆ ಮಹಿಳೆಯರಿಗಿಂತ ಗರ್ಭಿಣಿಯರು ಮತ್ತು ಬಾಣಂತಿಯರ ಜೀವನಶೈಲಿ ಭಿನ್ನವಾಗಿರುತ್ತದೆ. ನವಜಾತ ಶಿಶುವಿನ ಆರೈಕೆಯ ಜೊತೆಗೆ ತಮ್ಮ ಆರೈಕೆಯ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ಎದೆ ಹಾಲು ಉಣಿಸುವ ತಾಯಂದಿರು ದೈಹಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ತಾವು ಯಾವ ರೀತಿಯ ಬ್ರಾ ಧರಿಸಿದರೆ ಸೂಕ್ತ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಅದರ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಸ್ತನಗಳು ಜೋತು ಬೀಳುತ್ತದೆ, ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಹಾಲುಣಿಸುವ ಮಹಿಳೆಯರು ಸಹ ಬ್ರಾ ಧರಿಸುತ್ತಾರೆ. ಆದರೆ ಈ ಸಮಯದಲ್ಲಿ ಯಾವ ಬ್ರಾ ಧರಿಸಿದರೆ ಒಳ್ಳೆಯದು ಎಂಬ ಬಗ್ಗೆ ಹೆಚ್ಚಿನ ತಾಯಂದಿರಿಗೆ ಗೊತ್ತಿಲ್ಲ.ಹಾಲುಣಿಸಲು ಸುಲಭವಾಗಲು ಹಾಗೂ ಕಿರಿಕಿರಿ ಭಾವನೆ ಉಂಟಾಗದಿರಲು ಯಾವ ಬ್ರಾ ಧರಿಸಿದರೆ ಸೂಕ್ತ ಎಂಬುದನ್ನು ತಿಳಿಯಿರಿ.

1 / 6
ಎದೆ ಹಾಲು ಉಣಿಸುವ ತಾಯಂದಿರು ಸ್ತನಗಳು ಜೋತು ಬೀಳುತ್ತವೆ, ಬೆನ್ನು ನೋವು ಕಾಣಿಸಿಕೊಳ್ಳುತ್ತವೆ ಎಂಬ ಕಾರಣಕ್ಕೆ ಬ್ರಾ ಧರಿಸುತ್ತಾರೆ. ಆದರೆ ಹೆಚ್ಚಿನವರಿಗೆ ಹೆರಿಗೆಯ ನಂತರ ಯಾವ ಬ್ರಾ ಧರಿಸಿದರೆ ಸೂಕ್ತ ಎಂಬ ವಿಚಾರ ತಿಳಿದಿಲ್ಲ. ಬಹುತೇಕ ತಾಯಂದಿರು ಸಾಮಾನ್ಯ ಬ್ರಾಗಳನ್ನೇ ಧರಿಸುತ್ತಾರೆ. ಇದರಿಂದ ಕಿರಿಕಿರಿ ಭಾವನೆ ಉಂಟಾಗುತ್ತದೆ. ಆದ್ದರಿಂದ ಸ್ತನ್ಯಪಾನ ಮಾಡಲು ಸುಲಭವಾಗಲು, ತ್ವಚೆಯ ಕಿರಿಕಿರಿಯನ್ನು ತಪ್ಪಿಸಲು ಹಾಲುಣಿಸುವ ತಾಯಂದಿರು ಸೂಕ್ತವಾದ ಬ್ರಾ ಧರಿಸಬೇಕು.

ಎದೆ ಹಾಲು ಉಣಿಸುವ ತಾಯಂದಿರು ಸ್ತನಗಳು ಜೋತು ಬೀಳುತ್ತವೆ, ಬೆನ್ನು ನೋವು ಕಾಣಿಸಿಕೊಳ್ಳುತ್ತವೆ ಎಂಬ ಕಾರಣಕ್ಕೆ ಬ್ರಾ ಧರಿಸುತ್ತಾರೆ. ಆದರೆ ಹೆಚ್ಚಿನವರಿಗೆ ಹೆರಿಗೆಯ ನಂತರ ಯಾವ ಬ್ರಾ ಧರಿಸಿದರೆ ಸೂಕ್ತ ಎಂಬ ವಿಚಾರ ತಿಳಿದಿಲ್ಲ. ಬಹುತೇಕ ತಾಯಂದಿರು ಸಾಮಾನ್ಯ ಬ್ರಾಗಳನ್ನೇ ಧರಿಸುತ್ತಾರೆ. ಇದರಿಂದ ಕಿರಿಕಿರಿ ಭಾವನೆ ಉಂಟಾಗುತ್ತದೆ. ಆದ್ದರಿಂದ ಸ್ತನ್ಯಪಾನ ಮಾಡಲು ಸುಲಭವಾಗಲು, ತ್ವಚೆಯ ಕಿರಿಕಿರಿಯನ್ನು ತಪ್ಪಿಸಲು ಹಾಲುಣಿಸುವ ತಾಯಂದಿರು ಸೂಕ್ತವಾದ ಬ್ರಾ ಧರಿಸಬೇಕು.

2 / 6

ಮೆಟರ್ನಿಟಿ ಬ್ರಾ: ಮಗುವಿಗೆ ಹಾಲುಣಿಸುವ ಸಮಯದಲ್ಲಿ, ಬಾಣಂತಿಯರು ಸಾಮಾನ್ಯ ಬ್ರಾ ಬದಲಿಗೆ ಮೆಟರ್ನಿಟಿ ಬ್ರಾ ಧರಿಸಿದರೆ ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಮೆಟರ್ನಿಟಿ ಬ್ರಾಗಳನ್ನು ತುಂಬಾ ಮೃದುವಾದ ಬಟ್ಟೆಯಿಂದ ತಯಾರಿಸುವ ಕಾರಣದಿಂದ ಇವು ಸಾಕಷ್ಟು ಆರಾಮದಾಯಕವಾಗಿರುತ್ತವೆ. ತಾಯಿಯ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೆಟರ್ನಿಟಿ ಬ್ರಾವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಆರಾಮದಾಯಕವಾಗಿದ್ದು, ಸ್ತನಗಳಿಗೆ ಸರಿಯಾದ ಆಕಾರವನ್ನೂ ನೀಡುತ್ತೆ ಮತ್ತು ಇದು ಯಾವುದೇ ಕಿರಿಕಿರಿಯನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಹಾಲುಣಿಸುವ ಮಹಿಳೆಯರು ಸಾಮಾನ್ಯ ಬ್ರಾ ಬದಲು ಮೆಟರ್ನಿಟಿ ಬ್ರಾ ಧರಿಸುವುದು ಸೂಕ್ತ.

3 / 6

ನರ್ಸಿಂಗ್‌ ಬ್ರಾ: ಸಾಮಾನ್ಯ ಬ್ರಾ ಬದಲು ಎದೆ ಹಾಲು ಉಣಿಸುವ ತಾಯಂದಿರು ನರ್ಸಿಂಗ್‌ ಬ್ರಾ ಧರಿಸುವುದು ಉತ್ತಮ. ಹೆರಿಗೆಯ ನಂತರ ಮಗುವಿಗೆ ಆರಾಮವಾಗಿ ಹಾಲುಣಿಸುವ ಸಲುವಾಗಿಯೇ ನರ್ಸಿಂಗ್ ಬ್ರಾ ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಬ್ರಾ ಗಳ ಬಟ್ಟೆ ತುಂಬಾನೇ ಮೃದುವಾಗಿರುವುದರಿಂದ ತ್ವಚೆಗೆ ಯಾವುದೇ ಕಿರಿಕಿರಿಯನ್ನು ಉಂಟು ಮಾಡುವುದಿಲ್ಲ. ಹಾಲುಣಿಸುವ ತಾಯಂದಿರಿಗೆ ಬೇಸಿಕ್ಸ್ ನರ್ಸಿಂಗ್ ಬ್ರಾ ಕೂಡ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಸ್ತನಗಳ ಆಕಾರವನ್ನು ಸುಧಾರಿಸುತ್ತದೆ.

4 / 6

ಹೆರಿಗೆಯ ನಂತರ ಕನಿಷ್ಠ 6 ತಿಂಗಳ ಕಾಲ ಅಂಡರ್ ವೈರ್ ಬ್ರಾ ಧರಿಸುವುದನ್ನು ತಪ್ಪಿಸಬೇಕು. ಏಕೆಂದರೆ ಎದೆಹಾಲುಣಿಸುವ ಸಮಯದಲ್ಲಿ ಅಂಡರ್‌ವೈರ್ ಹೊಂದಿರುವ ಬ್ರಾಗಳು ಕಿರಿಕಿರಿ, ಅನಾನುಕೂಲತೆಯನ್ನು ಉಂಟುಮಾಡಬಹುದು ಮತ್ತು ಹಾಲಿನ ಉತ್ಪಾದನೆಯ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಇಂತಹ ಬ್ರಾ ಧರಿಸುವುದನ್ನು ತಪ್ಪಿಸಿ.

5 / 6

ಇನ್ನೊಂದು ವಿಷಯವೇನೆಂದರೆ ಎದೆ ಹಾಲು ಉಣಿಸುವ ತಾಯಂದಿರು ಹತ್ತಿ ಮತ್ತು ಇತರೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬ್ರಾಗಳನ್ನೇ ಧರಿಸಬೇಕು. ಜೊತೆಗೆ ತುಂಬಾ ಬಿಗಿಯಾಗಿರದ ಹಾಗೂ ಆರಾಮದಾಯಕವಾಗಿರುವ ಬ್ರಾ ಧರಿಸಬೇಕು. ಏಕೆಂದರೆ ಬಿಗಿಯಾದ ಬ್ರಾ ಎದೆ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

6 / 6

ಇಷ್ಟು ಮಾತ್ರವಲ್ಲದೆ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಶಿಶುವಿನ ಆರೋಗ್ಯದ ದೃಷ್ಟಿಯಿಂದ ಎದೆ ಹಾಲು ಉಣಿಸುವ ತಾಯಂದಿರು ದೀರ್ಘಕಾಲ ಒಂದೇ ಬ್ರಾ ಧರಿಸಬಾರದು. ಹೀಗೆ ಬ್ರಾ ಚೇಂಜ್‌ ಮಾಡದಿದ್ದರೆ ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸ್ವಚ್ಛತೆ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಆಗಾಗ್ಗೆ ಬ್ರಾ ಚೇಂಜ್‌ ಮಾಡುತ್ತಿರಬೇಕು.

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us