
ಖ್ಯಾತ ನಟಿ ಪೂಜಾ ಹೆಗ್ಡೆ ಅವರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ.

ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ಪೋಸ್ ನೀಡುವ ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್ ಧರಿಸುತ್ತಾರೆ. ನಟಿ ಪೂಜಾ ಹೆಗ್ಡೆ ಅವರು ವಿಶೇಷವಾಗಿ ವಿನ್ಯಾಸಗೊಂಡ ಗೌನ್ ಧರಿಸಿದ್ದಾರೆ. ಗುಲಾಬಿ ಬಣ್ಣದ ಈ ಪೋಷಾಕಿನಲ್ಲಿ ಅವರು ಗಮನ ಸೆಳೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋಸ್ ಸಖತ್ ವೈರಲ್ ಆಗಿವೆ. ಪೂಜಾ ಹೆಗ್ಡೆ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನು ಕೊಂಡಾಡಿದ್ದಾರೆ.

ಬಹುಭಾಷೆಯಲ್ಲಿ ಪೂಜಾ ಹೆಗ್ಡೆ ಫೇಮಸ್ ಆಗಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶಾದ್ಯಂತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ವರ್ಷ ಪೂಜಾ ಹೆಗ್ಡೆ ನಟಿಸಿದ ‘ರಾಧೆ ಶ್ಯಾಮ್’, ‘ಬೀಸ್ಟ್’, ‘ಆಚಾರ್ಯ’ ಚಿತ್ರಗಳು ರಿಲೀಸ್ ಆಗಿವೆ.

ಪ್ರಸ್ತುತ ಸಲ್ಮಾನ್ ಖಾನ್ ಜೊತೆ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಕೆಲಸಗಳಲ್ಲಿ ಪೂಜಾ ಹೆಗ್ಡೆ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅವರು ಶೂಟಿಂಗ್ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.