
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಸದಾ ಒದಿಲ್ಲೊಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇರುತ್ತಾರೆ. ಈಗ ಚೈತ್ರಾ ಅವರು ನೀಡಿರೋ ಒಂದು ಹೇಳಿಕೆ ಗಮನ ಸೆಳೆಯುತ್ತಿದೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಹೆರಿಗೆ ನೋವಿನ ಬಗ್ಗೆ ಮಾತನಾಡಿದ್ದಾರೆ. ಅದು ಯಾವ ರೀತಿಯಲ್ಲಿ ಇರಬಹುದು ಎಂದು ಅವರು ಊಹಿಸಿಕೊಂಡಿದ್ದಾರೆ. ಅಲ್ಲದೆ, ಅದೇ ರೀತಿಯ ಅನುಭವ ಅವರಿಗೆ ಆಗಿರೋ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಆದರೆ, ಚೈತ್ರಾಗೆ ಪ್ರ್ಯಾಂಕ್ ಮಾಡಲಾಯಿತು. ಅವರನ್ನು ಕನ್ಫೆಷನ್ರೂಂನಲ್ಲಿ ಕೂರಿಸಲಾಗಿತ್ತು. ತಾವು ಎಲಿಮಿನೇಟ್ ಆದೆ ಎಂದು ಅವರು ಭಾವಿಸಿದ್ದರು. ಆದರೆ, ಎಲಿಮಿನೇಟ್ ಆಗದೆ ಅವರು ಉಳಿದುಕೊಂಡರು. ಆ ಬಳಿಕ ಬಂದ ಅವರು ಮಾತನಾಡಿದ್ದಾರೆ.

‘ಹೆರಿಗೆ ನೋವು ಹೆಣ್ಣುಮಕ್ಕಳಿಗೆ ಪುನರ್ಜನ್ಮ ಎನ್ನುತ್ತಾರೆ. ಅದು ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಎಲಿಮಿನೇಟ್ ಆದಾಗ ಆಗುತ್ತಿದ್ದ ಫೀಲ್ ಇದೆಯಲ್ಲ. ಬಹುಶಃ ಹೆರಿಗೆ ನೋವು ಕೂಡ ಹೀಗೆಯೇ ಇರುತ್ತದೆ ಅನಿಸುತ್ತದೆ’ ಎಂದಿದ್ದಾರೆ ಚೈತ್ರಾ.

ಚೈತ್ರಾ ಕುಂದಾಪುರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರು ಅನಾರೋಗ್ಯ ಕಾರಣಕ್ಕೆ ಒಮ್ಮೆ ಹೊರಕ್ಕೆ ಹೋಗಿ ಬಂದರೆ, ಮತ್ತೊಮ್ಮೆ ಕೋರ್ಟ್ ಕಾರಣಕ್ಕೆ ಹೊರಕ್ಕೆ ಹೋಗಿ ಬಂದಿದ್ದರು.
Published On - 11:54 am, Tue, 10 December 24