- Kannada News Photo gallery Chikkaballapur festival Desi Style Fashion show Ramp walk by children young youths and Elders chikkaballapur news in kannada
ಚಿಕ್ಕಬಳ್ಳಾಪುರದಲ್ಲಿ ನಾಟಿ ಸ್ಟೈಲ್ ಫ್ಯಾಷನ್ ಶೋ: ಯುವಕ-ಯುವತಿಯರಲ್ಲದೆ ಮುದುಕ-ಮುದುಕಿಯರಿಂದಲೂ ರ್ಯಾಂಪ್ ವಾಕ್
ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಮಕ್ಕಳಿಂದ ಹಿಡಿದು ವೃದ್ದರವರೆಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಪ್ಯಾಷನ್ ಶೋನಲ್ಲಿ ಮಕ್ಕಳು ಮಾತ್ರವಲ್ಲದೆ, ಹಿರಿಯರು ಕೂಡ ರ್ಯಾಂಪ್ ವಾಕ್ ಮಾಡಿದರು.
Updated on:Jan 13, 2023 | 8:23 PM

ಪ್ಯಾಷನ್ ಶೋ ಎಂದರೆ ಮಿರಾಮಿರಾ ಮಿಂಚುವ ಮಿಂಚುಳ್ಳಿಯರು, ಕಲರ್‌ಪುಲ್ ಲೈಟಿಂಗ್‌ನಲ್ಲಿ ಸೊಂಟ ಬಳಕಿಸುವ ಬಳ್ಳಿಯರು ಮಾತ್ರ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಆಯೋಜನೆ ಮಾಡಿರುವ ಪ್ಯಾಷನ್ ಶೋನಲ್ಲಿ ಮಕ್ಕಳಿಂದ ಹಿಡಿದು 60 ವರ್ಷದ ಮುದುಕ-ಮುದುಕಿಯರವರೆಗೂ ಪ್ಯಾಷನ್ ಶೋ ನಡೆಯಿತು.

ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಮಕ್ಕಳಿಂದ ಹಿಡಿದು ವೃದ್ದರವರೆಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಪ್ಯಾಷನ್ ಶೋನಲ್ಲಿ 18 ವರ್ಷದ ಒಳಗಿನ ಬಾಲೆಯರು, 18 ವರ್ಷದಿಂದ 50 ವರ್ಷದವರೆಗಿನ ಯುವತಿಯರು, ಗೃಹಿಣಿಯರು ಹಾಗೂ 50 ರಿಂದ 60 ವರ್ಷದ ವಯಸ್ಸಿನವರಿಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು.

ಸ್ಥಳೀಯ ಉಡುಗೆ, ತೊಡುಗೆ ಸೇರಿದಂತೆ ವೆಸ್ಟ್ರಾನ್, ಡಿಂಗ್‌ಡಾಂಗ್ ಡ್ರೆಸ್‌ವರೆಗೂ ಕಲರ್‌ಪುಲ್ ಡ್ರೆಸ್ ಮಾಡಿಕೊಂಡು ಬಂದ ವಯೋವೃದ್ದರು ಸಹ ಪ್ಯಾಷನ್ ಶೋನಲ್ಲಿ ಬಾಗಿಯಾಗಿದರು. ಗೃಹಿಣಿಯರಂತೂ ತಲೆತುಂಬಾ ಮಲ್ಲಿಗೆ ಹೂವು ಮುಡಿದು ನಾಚುತ್ತಾ ಕ್ಯಾಟ್‌ವಾಕ್ ಮಾಡಿದ್ದು ಗಮನ ಸೆಳೆಯಿತು.

ನವ ಹಾಗೂ ಯುವ ದಂಪತಿಗಳು ಹಾಗೂ 50 ವರ್ಷ ಮೇಲ್ಪಟ್ಟ ದಂಪತಿಗಳು ಸಹ ಮುಗಿಬಿದ್ದು, ನಾಚುತ್ತಾ, ಕುಂಟುತಾ, ಸೊಂಟ ಬಳುಕಿಸಿ ಪ್ಲೇನ್ ಕಿಸ್ ಕೊಡುತ್ತಿದ್ದರೆ ನೆರೆದಿದ್ದವರ ಎದೆಯಲ್ಲಿ ಕಚಗುಳಿ ಇಟ್ಟಂತೆ ಬಾಸವಾಗುತ್ತಿತ್ತು. ಮಾರ್ಜಾಲ ನಡಿಗೆಯಲ್ಲಿ ಟೈಟ್‌ಡ್ರೆಸ್‌ನಲ್ಲಿ ಯುವತಿಯರು ಸೊಂಟ ಬಳುಕಿಸಿದರು.

ವಯೋವೃದ್ದ ಅಜ್ಜಿಯರು ಕೇಳಬೇಕೇ.. ಅವರೂ ಸಹಾ ಕ್ಯಾಟ್‌ವಾಕ್ ಮಾಡಿ ಪ್ಯಾಶನ್ ಶೋಗೆ ಬಂದಿದ್ದ ಯುವತಿಯರನ್ನು ನಾಚಿಸಿದರು. ಇನ್ನು, ಈವರೆಗೆ ಪ್ಯಾಷನ್ ಶೋನಲ್ಲಿ ಭಾಗಿಯಾಗದ ಯುವತಿಯರಂತು ತಳಕು, ಬಳಕು ಹೆಜ್ಜೆಯನ್ನಿಟ್ಟು ಸೈ ಎನಿಸಿಕೊಂಡರು. (ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ)
Published On - 8:17 pm, Fri, 13 January 23




