ಹೊಟ್ಟೆಗೂ ಇಲ್ಲ, ಜುಟ್ಟಿಗೂ ಇಲ್ಲ: ಬಿಸಿಲ ತಾಪಕ್ಕೆ ಕಮರಿದ ಹೂ; ನಷ್ಟದ ಸುಳಿಯಲ್ಲಿ ಬೆಳೆಗಾರರು

Edited By:

Updated on: Apr 16, 2026 | 6:04 PM

ಚಿಕ್ಕಬಳ್ಳಾಪುರವು ವೈವಿಧ್ಯಮಯ ಹೂ ಕೃಷಿಗೆ ಹೆಸರುವಾಸಿ. ಆದರೆ, ಈ ಬಾರಿ ತೀವ್ರ ಬೇಸಿಗೆ ಮತ್ತು ಅತಿಯಾದ ತಾಪಮಾನದಿಂದ ಹೂ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 37-38 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಗಿಡಗಳು ಬೆಳೆಯುತ್ತಿಲ್ಲ, ಹೂಗಳು ಅರಳುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂಗಳ ಅಭಾವ ಉಂಟಾಗಿ, ರೈತರಿಗೆ ಆರ್ಥಿಕ ಹೊಡೆತ ಬಿದ್ದಿದೆ.

1 / 5
ಕಲರ್ ಫುಲ್ ವಿವಿಧ ತಳಿಯ ಹೂವಿನ ಕೃಷಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಖ್ಯಾತಿ ಹೊಂದಿದೆ. ಆದರೆ ಈ ಭಾರಿಯ ಬೇಸಿಗೆ ಹೂ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅತಿಯಾದ ತಾಪಮಾನದಿಂದ ಗಿಡಗಳು ಬೆಳೆಯುತ್ತಿಲ್ಲ, ಹೂಗಳು ಅರಳುತ್ತಿಲ್ಲ.  ಮಾರುಕಟ್ಟೆಯಲ್ಲಿ ಹೂ ಸಹ ದೊರೆಯುತ್ತಿಲ್ಲ. ಯಾಕಾದರೂ ಬೇಸಿಗೆ ಬಂತು ಎನ್ನುವಂತಾಗಿದೆ. 

ಕಲರ್ ಫುಲ್ ವಿವಿಧ ತಳಿಯ ಹೂವಿನ ಕೃಷಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಖ್ಯಾತಿ ಹೊಂದಿದೆ. ಆದರೆ ಈ ಭಾರಿಯ ಬೇಸಿಗೆ ಹೂ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅತಿಯಾದ ತಾಪಮಾನದಿಂದ ಗಿಡಗಳು ಬೆಳೆಯುತ್ತಿಲ್ಲ, ಹೂಗಳು ಅರಳುತ್ತಿಲ್ಲ.  ಮಾರುಕಟ್ಟೆಯಲ್ಲಿ ಹೂ ಸಹ ದೊರೆಯುತ್ತಿಲ್ಲ. ಯಾಕಾದರೂ ಬೇಸಿಗೆ ಬಂತು ಎನ್ನುವಂತಾಗಿದೆ. 

2 / 5

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿವಿಧ ಹೂ ಗಳನ್ನು ಬೆಳೆಯಾಗಲಾಗುತ್ತದೆ. 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ಹೂ ಬೆಳೆಲಾಗುತ್ತದೆ. ಆದರೆ ಈಗ ತಾಪಮಾನ ಹೆಚ್ಚಾದ ಕಾರಣ, ಹೂ ಗಿಡಗಳನ್ನು ಬೆಳೆಯಲು ಕಷ್ಟ ಸಾಧ್ಯವಾಗುತ್ತಿದೆ. 37-38 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ದಾಖಲಾಗ್ತಿದೆ. ಇದರಿಂದ ಹೂಗಳು ಬಾಡುತ್ತಿವೆ.

3 / 5

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ರೈತ ಮುರಳಿ ಎನ್ನುವವರು ಹಗಲು ರಾತ್ರಿ ಕಷ್ಟಪಟ್ಟು ಲಕ್ಷಾಂತರ ರೂ ಬಂಡವಾಳ ಹೂಡಿ ಸೇವಂತಿ ಹೂ ಬೆಳೆದಿದ್ದಾರೆ. ಆದರೆ ವಿರೀತ ತಾಪಮಾನಕ್ಕೆ ಹೂವಿನ ಗಿಡಗಳು ಮೊಗ್ಗು ಕಟ್ಟಿದ್ದರೂ ಹೂ ಮಾತ್ರ ಬಿಡುತ್ತಿಲ್ಲ. 

4 / 5

ಪದೇ ಪದೇ ನೀರು ಬಿಟ್ಟು ಭೂಮಿ ತಂಪಾಗಿಟ್ಟರು ಬಿಸಿಲಿಗೆ ಹೂ ಅರಳುತ್ತಿಲ್ಲ. ಮೂರು ತಿಂಗಳಿಗೆ ಹೂ ಬರಬೇಕಿತ್ತು. ಆದರೆ ಮೂರುವರೆ ತಿಂಗಳಾದರೂ ಹೂ ಅರಳುತ್ತಿಲ್ಲ. ತಾಪಮಾನ ಹೆಚ್ಚಾಗಿ ಹೂವಿನ ಗಿಡ ಬೆಳೆಯಲಾಗುತ್ತಿಲ್ಲ.

5 / 5

ತಂಪಾದ ಹವಗುಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಈಗ ಉಷ್ಣಾಂಶ ದಾಖಲೆ ಮಟ್ಟಕ್ಕೇರಿದೆ. ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ತಳಿಯ ಹೂವುಗಳು ಗಿಡದಲ್ಲೇ ಒಣಗುತ್ತಿದ್ದು, ಬಿಸಿಲಿನ ತಾಪ ಹೂ ಬೆಳೆಗಾರರ ಬದುಕನ್ನು ಕಮರಿಸುತ್ತಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us