- Kannada News Photo gallery Chitradurga Farmers using Lime to Arecanut Crop to protect from Summer Heat
ಅಡಿಕೆ ಬೆಳೆ ರಕ್ಷಣೆಗೆ ಚಿತ್ರದುರ್ಗ ರೈತರಿಂದ ವಿನೂತನ ಪ್ರಯೋಗ
ಚಿತ್ರದುರ್ಗದಲ್ಲಿ ಏರುತ್ತಿರುವ ತಾಪಮಾನದಿಂದ ಅಡಿಕೆ ಬೆಳೆಗೆ ತೀವ್ರ ಹಾನಿಯಾಗುತ್ತಿದೆ. 40 ಡಿಗ್ರಿ ಸೆಲ್ಸಿಯಸ್ ತಲುಪಿರುವ ಉಷ್ಣಾಂಶದಿಂದ ಅಡಿಕೆ ಮರಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಅಡಿಕೆ ಬೆಳೆ ರಕ್ಷಣೆಗಾಗಿ ಚಿತ್ರದುರ್ಗದ ರೈತರು ರೈತರು ವಿನೂತನ ಪ್ರಯೋಗವೊಂದು ಮಾಡಿದ್ದಾರೆ. ಈ ಮೂಲಕ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
Updated on: Apr 07, 2025 | 9:43 PM

ಆರಂಭದಲ್ಲೇ 40 ಡಿಗ್ರಿ ಸೆಲ್ಸಿಯಸ್ಗೆ ಉಷ್ಣಾಂತ ತಲುಪಿದೆ. ಪರಿಣಾಮ ಅಡಿಕೆ ಬೆಳೆಗೂ ಉಷ್ಣಾಂಶದ ತಾಪಮಾನದ ದುಷ್ಪರಿಣಾಮ ಬೀರುತ್ತಿದ್ದು, ಬೆಳೆ ರಕ್ಷಣೆಗೆ ರೈತರು ಹೊಸ ದಾರಿ ಕಂಡುಕೊಂಡಿದ್ದಾರೆ.

ಅತಿಯಾದ ಉಷ್ಣಾಂಶ ಅಡಿಕೆ ಬೆಳೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ವಿವಿಧ ರೋಗಗಳಿಗೆ ಅಡಿಕೆ ಬೆಳೆಗೆ ಹಾನಿಯಾಗುತ್ತಿದೆ. ಬಿಸಿಲಿನ ತಾಪಮಾನದಿಂದ ಕೋಟೆನಾಡು ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ರೈತರು ಬೆಳೆ ರಕ್ಷಣೆಗೆ ಸುಣ್ಣದ ಮೊರೆ ಹೋಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ ತಾಪಮಾನ 40ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಪರಿಣಾಮ ಅಡಿಕೆ ಬೆಳೆಗೆ ವಿವಿಧ ರೋಗಗಳು ತಗುಲಿ ಬೆಳೆ ಹಾನಿಗೆ ಕಾರಣವಾಗುತ್ತಿವೆ. ಅಂತೆಯೇ ಬಿಸಿಲಿನ ಉಷ್ಣಾಂಶದಿಂದ ಅಡಿಕೆ ಮರಕ್ಕೆ ಹಾನಿ ಆಗುತ್ತದೆ. ಹೀಗಾಗಿ, ಬಿಸಿಲಿನ ತಾಪಮಾನದಿಂದ ರಕ್ಷಣೆಗೆ ಅಡಿಕೆ ಮರಗಳಿಗೆ ರೈತರು ಸುಣ್ಣ ಹಚ್ಚುತ್ತಿದ್ದಾರೆ.

ಚಿತ್ರದುರ್ಗ , ಹಿರಿಯೂರು ಹೊಳಲ್ಕೆರೆ ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭದ್ರಾ ಯೋಜನೆ ನೀರು ಬರುವ ನಿರೀಕ್ಷೆಯಲ್ಲಿ ಅನೇಕರು ಅಡಿಕೆ ಬೆಳೆ ಮೊರೆ ಹೋಗಿದ್ದಾರೆ. ಆದರೆ, ಇದೀಗ ಉಷ್ಣಾಂಶ ಹೆಚ್ಚಳದಿಂದ ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.

ಅಡಿಕೆ ಬೆಳೆ ರಕ್ಷಣೆಗೆ ರೈತರು ಸುಣ್ಣದ ಮೊರೆ ಹೋಗಿದ್ದು ಸುಣ್ಣಕ್ಕೆ ಬೇಡಿಕೆ ಹೆಚ್ಚಿದೆ. ಚೀಲ ಸುಣ್ಣಕ್ಕೆ ಸಾವಿರ ರೂಪಾಯಿ ಇದ್ದು, ಬೆಲೆ ದುಬಾರಿ ಆಗಿದೆ. ಸುಣ್ಣದ ಜತೆಗೆ ಬೆಲ್ಲ, ಮೈದಾ ಹಿಟ್ಟು ಸಮಪ್ರಮಾಣದಲ್ಲಿ ಮಿಶ್ರಣಗೊಳಿಸಿ ಅಡಿಕೆ ಮರಕ್ಕೆ ಹಚ್ಚಲಾಗುತ್ತದೆ. ಹೀಗಾಗಿ, ಸುಣ್ಣದ ಬೇಡಿಕೆ ಹೆಚ್ಚಿದ್ದು, ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ .

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಆದರೆ, ಅತಿಯಾದ ಉಷ್ಣಾಂಶದಿಂದಾಗಿ ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ಹೀಗಾಗಿ, ರೈತಾಪಿ ವರ್ಗ ಅಡಿಕೆಗೆ ಸುಣ್ಣ ಹಚ್ಚುವ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿದ್ದು ಕೋಟೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.



















