- Kannada News Photo gallery Citroen E-C3 electric officially unveiled in India bookings open on 22 January
Citroen eC3: ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಮೈಕ್ರೊ ಎಸ್ ಯುವಿ ಅನಾವರಣ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಇಸಿ3 ಮೈಕ್ರೊ ಎಸ್ ಯುವಿ ಮಾದರಿಯನ್ನ ಅನಾವರಣಗೊಳಿಸಿದೆ. ಹೊಸ ಇವಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಸಿ3 ಕಾರು ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಇವಿ ಕಾರಿನ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Updated on:Jan 18, 2023 | 8:44 PM

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಸಿಟ್ರನ್ ಇಂಡಿಯಾ ಕಂಪನಿಯು ಕೂಡಾ ಬಹುನೀರಿಕ್ಷಿತ ಇಸಿ3 ಎಲೆಕ್ಟ್ರಿಕ್ ಕಾರು ಮಾದರಿಯನ್ನ ಅನಾವರಣಗೊಳಿಸಿದೆ. ಹೊಸ ಇವಿ ಕಾರು ಮಾದರಿಯು ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣಗೊಂಡಿದ್ದು, ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಹೊಸ ಕಾರು ಅನಾವರಣದೊಂದಿಗೆ ಸಿಟ್ರನ್ ಕಂಪನಿಯು ಇದೇ ತಿಂಗಳು 22ರಂದು ಬುಕಿಂಗ್ ಆರಂಭಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ ವೇಳೆಗೆ ಹೊಸ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಇಸಿ3 ಎಲೆಕ್ಟ್ರಿಕ್ ಕಾರಿನಲ್ಲಿ ಸಿಟ್ರನ್ ಕಂಪನಿಯು 29.2kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ARAi ಸಂಸ್ಥೆಯು ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ನೀಡಲಿದೆ.

ಫ್ರಂಟ್ ಆಕ್ಸೆಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಹೊಸ ಕಾರು 56.3 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ 143 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹಲವಾರು ಲೋಕಲೈಜ್ಡ್ ಬಿಡಿಭಾಗಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ 3.3kW AC ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು 10 ಗಂಟೆ 30 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಹಾಗೆಯೇ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದರೆ ಕೇವಲ 57 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜ್ ಆಗಲಿದೆ.

ಸಾಮಾನ್ಯ ಸಿ3 ಕಾರಿನಂತೆಯೇ ವಿನ್ಯಾಸ ಹೊಂದಿರುವ ಹೊಸ ಇಸಿ3 ಕಾರು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಎಲೆಕ್ಟ್ರಿಕ್ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 12 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಹೊಸ ಇವಿ ಕಾರು ಖರೀದಿಯ ಮೇಲೆ ಸಿಟ್ರನ್ ಕಂಪನಿಯು ಬ್ಯಾಟರಿ ಮೇಲೆ 7 ವರ್ಷ ಅಥವಾ 1.40 ಲಕ್ಷ ಕಿ.ಮೀ ಮತ್ತು ಎಲೆಕ್ಟ್ರಿಕ್ ಮೋಟಾರ್ ಮೇಲೆ ಮೂರು ವರ್ಷ ಅಥವಾ 1.25 ಲಕ್ಷ ಕಿ.ಮೀ ಮೇಲೆ ವಾರಂಟಿ ಘೋಷಣೆ ಮಾಡಿದೆ.
Published On - 8:44 pm, Wed, 18 January 23




