Lalbagh Flower Show: ಲಾಲ್ ಬಾಗ್ ಪ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಅಂಬೇಡ್ಕರ್ ಮೊಮ್ಮಗ ಭಾಗಿ
ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಫ್ಲವರ್ ಶೋ ಆರಂಭವಾಗುತ್ತಿದ್ದು, ಆಗಸ್ಟ್ 19ರ ವರೆಗೆ ಫ್ಲವರ್ ಶೋ ಇರಲಿದೆ. 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಈ ಬಾರಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್ಶೋ ಪ್ರದರ್ಶನ ಆಯೋಜನೆ ಮಾಡಲಾಗಿದೆ.
1 / 7
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಲಾಲ್ಬಾಗ್ನ ಗಾಜಿನಮನೆಯಲ್ಲಿ ಫ್ಲವರ್ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ.
2 / 7
ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮರಾಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.
3 / 7
ಪ್ಲವರ್ ಶೋನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಒಂದೇ ಸ್ಥಳದಲ್ಲಿ ಜನರನ್ನ ಮೋಡಿ ಮಾಡುತ್ತಿದ್ದು, ಒಟ್ಟು 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಫ್ಲವರ್ ಶೋಗೆಂದೆ ಆಂಧ್ರ, ಊಟಿ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೂಗಳು ಬಂದಿದ್ದು, ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಮೋಡಿ ಮಾಡಿವೆ.
4 / 7
ಫ್ಲವರ್ ಶೋ ನಲ್ಲಿ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ಅಗಪಾಂಥಸ್, ಸುಗಂಧ ರಾಜ ಸೇರಿದಂತೆ 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಕೊಳ್ಳಲಾಗಿದೆ. ಸುಮಾರು 8 ಲಕ್ಷ ಹೂಗಳು ಹೊರ ರಾಜ್ಯಗಳಿಂದ ಬಂದಿವೆ.
5 / 7
ಈ 12 ದಿನಗಳ ಈ ಪ್ರದರ್ಶನಕ್ಕೆ 2.80 ಕೋಟಿ ರೂ. ವ್ಯಯಿಸಲಾಗುತ್ತಿದೆ. ಅಂದಹಾಗೇ ಕಳೆದ ಪ್ಲವರ್ ಶೋ ನಲ್ಲಿ ಕಳೆದ ಬಾರಿ 60-70 ಲಕ್ಷ ರೂ. ಆದಾಯ ಹರಿದು ಬಂದಿತ್ತು. ಈ ವರ್ಷ ಅದಕ್ಕಿಂತ ಹೆಚ್ಚು ಆದಾಯ ಬರುವ ಸಾಧ್ಯಾತೆ ಇದೆ. ಹೀಗಾಗಿ ಪ್ರದರ್ಶನಕ್ಕೆ ಬರುವ ಜನರ ಅನುಕೂಲಕ್ಕಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
6 / 7
ವಯಸ್ಕರಿಗೆ 100 ರೂ, ಮಕ್ಕಳಿಗೆ 30 ರೂ.ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ 6 ಆಂಬ್ಯುಲೆಸ್ಸ್ ಸೇವೆ ಒದಗಿಸಲಾಗಿದೆ. ಡೆಂಗ್ಯು ಆತಂಕದಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.
7 / 7
ಕುಡಿಯುವ ನೀರಿಗಾಗಿ 18 ಕಡೆ ವ್ಯವಸ್ಥೆ ಮಾಡಿದ್ದು, ಹೆಚ್ಚುವರಿ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 136 ಸಿಸಿ ಟಿವಿ ಕ್ಯಾಮೆರಾಗಳು, 400 ಪೊಲೀಸರು, ಬಿಬಿಎಂಪಿ ಮಾರ್ಷಲ್ ಹಾಗೂ ಲಾಲ್‌ಬಾಗ್ ಸಿಬ್ಬಂದಿ ಭದ್ರತೆ ಒದಗಿಸಿದ್ದು, ಲಾಲ್ ಬಾಗ್ ನಾ ನಾಲ್ಕು ಗೇಟ್ ಗಳಲ್ಲಿ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.