AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coconut Oil: ಚರ್ಮದ ಕಾಂತಿಗೆ ತೆಂಗಿನ ಎಣ್ಣೆ ಸಹಕಾರಿಯಾಗಿದೆಯೇ..! ಇಲ್ಲಿದೆ ಮಾಹಿತಿ

Skin Care Tips: ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ತೆಂಗಿನ ಎಣ್ಣೆಯನ್ನು ಪ್ರಾಚೀನ ಕಾಲದಿಂದಲೂ ಸೌಂದರ್ಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ನೈಟ್ ಕ್ರೀಮ್ ಆಗಿ ಬಳಸುವುದು ಕೂಡ ಉತ್ತಮ ಹೊಂದಾಣಿಕೆಯಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on:Mar 24, 2022 | 3:45 PM

Share
ತೆಂಗಿನ ಎಣ್ಣೆ ತಣ್ಣಗಿರುತ್ತದೆ. ಇದು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತದೆ. ಇದು ಚರ್ಮವನ್ನು ಒಳಗಿನಿಂದ ಮೃದುವಾಗಿರಿಸುತ್ತದೆ.

1 / 6
ತೆಂಗಿನ ಎಣ್ಣೆಯಲ್ಲಿರುವ ಲಿನೋಲೆನಿಕ್ ಆಮ್ಲವು ಚರ್ಮಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಕೊಬ್ಬರಿ ಎಣ್ಣೆಯನ್ನು ರಾತ್ರಿಯಿಡೀ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಎಣ್ಣೆ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

2 / 6
Coconut Oil: ಚರ್ಮದ ಕಾಂತಿಗೆ ತೆಂಗಿನ ಎಣ್ಣೆ ಸಹಕಾರಿಯಾಗಿದೆಯೇ..! ಇಲ್ಲಿದೆ ಮಾಹಿತಿ

ಚರ್ಮದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡರೆ, ಆ ಕಲೆಗಳನ್ನು ತೆಗೆದುಹಾಕಲು ತೆಂಗಿನ ಎಣ್ಣೆಯು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯು ಕಾಲಜನ್​ನ್ನು ಹೊಂದಿರುತ್ತದೆ. ಇದು ಸುಕ್ಕುಗಳಂತಹ ವಯಸ್ಸಾದ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

3 / 6
Coconut Oil: ಚರ್ಮದ ಕಾಂತಿಗೆ ತೆಂಗಿನ ಎಣ್ಣೆ ಸಹಕಾರಿಯಾಗಿದೆಯೇ..! ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆ ಒಣ ತ್ವಚೆಯ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ. ಹವಾಮಾನದ ಕಾರಣದಿಂದ ಚರ್ಮವು ಶುಷ್ಕ ಮತ್ತು ಒರಟಾಗಿರುತ್ತದೆ. ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆಯನ್ನು ಬಳಸಿ. ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ನೀವು ಗಮನಿಸಬಹುದು.

4 / 6
Coconut Oil: ಚರ್ಮದ ಕಾಂತಿಗೆ ತೆಂಗಿನ ಎಣ್ಣೆ ಸಹಕಾರಿಯಾಗಿದೆಯೇ..! ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯು ಬಹಳಷ್ಟು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ತೆಂಗಿನ ಎಣ್ಣೆ ಉರಿಯೂತವನ್ನು ಕಡಿಮೆ ಮಾಡಲು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ನಿಮಗೆ ಮೊಡವೆ ಸಮಸ್ಯೆಗಳಿದ್ದರೆ, ನೀವು ರಾತ್ರಿಯಲ್ಲಿ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.

5 / 6
Coconut Oil: ಚರ್ಮದ ಕಾಂತಿಗೆ ತೆಂಗಿನ ಎಣ್ಣೆ ಸಹಕಾರಿಯಾಗಿದೆಯೇ..! ಇಲ್ಲಿದೆ ಮಾಹಿತಿ

ತೆರೆದ ರಂಧ್ರಗಳ ಸಮಸ್ಯೆಗಳು? ತೆಂಗಿನ ಎಣ್ಣೆಯನ್ನು ನೈಟ್ ಕ್ರೀಮ್ ಆಗಿ ಬಳಸಿ. ತೆಂಗಿನೆಣ್ಣೆಯು ತ್ವಚೆಯ ತೆರೆದ ರಂಧ್ರಗಳ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ.

6 / 6

Published On - 3:28 pm, Thu, 24 March 22