
‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ಇಂದು (ಆಗಸ್ಟ್ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾ ಎಂಬುವವರನ್ನು ಅವರು ಕೈ ಹಿಡಿದಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನೋರಂಜನ್ ರವಿಚಂದ್ರನ್-ಸಂಗೀತಾ ವಿವಾಹ ನಡೆದಿದೆ. ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ಶಿವರಾಜ್ಕುಮಾರ್, ಖುಷ್ಬೂ, ಹಂಸಲೇಖ, ಉಮಾಶ್ರೀ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. ನವ ಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮನೋರಂಜನ್ ರವಿಚಂದ್ರನ್ ಅವರು ಸಕ್ರಿಯರಾಗಿದ್ದಾರೆ. ‘ಸಾಹೇಬ’, ‘ಬೃಹಸ್ಪತಿ’, ‘ಮುಗಿಲ್ ಪೇಟೆ’, ‘ಆರಂಭ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮನೋರಂಜನ್ ಹಾಗೂ ಸಂಗೀತಾ ಅವರಿಗೆ ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅದ್ದೂರಿಯಾಗಿ ಮದುವೆ ನೆರವೇರಿದೆ.

ಅಕುಲ್ ಬಾಲಾಜಿ - ರವಿಚಂದ್ರನ್

ಮನೋರಂಜನ್-ಮಾಸ್ಟರ್ ಆನಂದ್

ಕೇಜಿಸ್ಟಾರ್ ರವಿಚಂದ್ರನ್ ಕುಟುಂಬ
Published On - 4:12 pm, Sun, 21 August 22